ಕೇರಳ ಕೊರೋನಾ ರೂಲ್ಸ್ ಪಾಲಿಸ್ತಿಲ್ಲ: ಕೇಂದ್ರ ಸರ್ಕಾರ

masthmagaa.com:

ಕೇರಳದಲ್ಲಿ ನಿರಂತರವಾಗಿ ಕೊರೋನಾ ಜಾಸ್ತಿಯಾಗುತ್ತಲೇ ಇದೆ. 85 ಪರ್ಸೆಂಟ್​ನಷ್ಟು ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೀತಿದ್ದು, ಅಲ್ಲಿ ರೋಗಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿಲ್ಲ. ಕೊರೋನಾ ಏರಿಕೆ ತಡೆಯೋಕೆ ಕೇರಳ ಸರ್ಕಾರ ಕೆಲವೊಂದು ಹೆಜ್ಜೆ ಇಡಬೇಕು ಅಂತ ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೇರಳದಲ್ಲಿ ಸ್ಮಾರ್ಟ್​ ಲಾಕ್​ಡೌನ್ ಅಗತ್ಯತೆ ಇದೆ. ಆದ್ರೆ ಕೇರಳ ಕೊರೋನಾ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಲಹೆ, ಸೂಚನೆಗಳನ್ನು ಪಾಲಿಸುತ್ತಿಲ್ಲ. ಇದ್ರಿಂದ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ 14ರಿಂದ 15 ಪರ್ಸೆಂಟ್ ಇದೆ. ಇದ್ರಿಂದ ಪಕ್ಕದ ರಾಜ್ಯಗಳಿಗೂ ತೊಂದ್ರೆಯಾಗ್ತಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply