ಕೊಲೆಪಾತಕಿಯನ್ನು ನೋಡಲು ಹಿಂಡು ಹಿಂಡಾಗಿ ಬಂದ ಜನ..!

ಹಣ ಮತ್ತು ಆಸ್ತಿಗಾಗಿ 14 ವರ್ಷಗಳಲ್ಲಿ ತನ್ನದೇ ಕುಟುಂಬದ 6 ಮಂದಿಯನ್ನು ಕೊಲೆಗೈದಿದ್ದ ಮಹಿಳೆಯನ್ನು ಇವತ್ತು ಕೇರಳದ ಕೊಝಿಕೋಡ್ ಕೋರ್ಟ್‍ಗೆ ಹಾಜರುಪಡಿಸಲಾಯ್ತು. ಮಹಿಳೆ ಜಾಲಿ ಶಜು, ಆಕೆಯ ಸ್ನೇಹಿತ ಎಂ.ಎಸ್.ಮ್ಯಾಥೀವ್ ಮತ್ತು ಸೈನೆಡ್ ಸಪ್ಲೈ ಮಾಡಿದ್ದ ಪ್ರಜಿಕಮಾರ್ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 47 ವರ್ಷದ ಜಾಲಿ ಶಜು ಅವರನ್ನು ತಮ್ಮ ಮಾಜಿ ಪತಿಯನ್ನು ಕೊಲೆಗೈದ ಆರೋಪದಲ್ಲಿ ಶನಿವಾರ ಬಂಧಿಸಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ಇನ್ನೂ ಐವರನ್ನು ಕೊಲೆಗೈದಿರೋದಾಗಿ ಜಾಲಿ ಬಾಯಿಬಿಟ್ಟಿದ್ದರು.

ಈ ಸುದ್ದಿ ಇಡೀ ಕೇರಳದಾದ್ಯಂತ ಸಂಚಲನ ಮೂಡಿಸಿದೆ. ಹೀಗಾಗಿ ಇಂದು ಈಕೆಯನ್ನು ಕೋರ್ಟ್‍ಗೆ ಕರೆತರುವ ಮುನ್ನ ಈಕೆಯನ್ನು ನೋಡಲು ಸಾವಿರಾರು ಜನ ಕೋರ್ಟ್ ಬಳಿ ಜಮಾಯಿಸಿದ್ದರು.

Contact Us for Advertisement

Leave a Reply