ವರ್ಲ್ಡ್‌ ಕಪ್‌ ಫೈನಲ್‌ ಮ್ಯಾಚ್‌ ನಿಲಸ್ತೀನಿ ಅಂತ ಬೆದರಿಕೆ ಹಾಕಿದ ಖಲಿಸ್ತಾನಿ ಉಗ್ರ!

masthmagaa.com:

ಇಡೀ ಜಗತ್ತಿನಾದ್ಯಂತ ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯ್ತಾ ಇರೋ ಕ್ರಿಕೆಟ್‌ ವರ್ಲ್ಡ್‌ಕಪ್‌ ಫೈನಲ್‌ ಪಂದ್ಯಕ್ಕೆ ಖಲಿಸ್ತಾನಿ ಉಗ್ರರ ಬೆದರಿಕೆ ಕಂಟಿನ್ಯೂ ಆಗಿದೆ. ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್, 2023ನ ಫೈನಲ್‌ ಪಂದ್ಯವನ್ನ ನಿಲ್ಲಿಸೋದಾಗಿ ಬೆದರಿಕೆ ಒಡ್ಡಿ ವೀಡಿಯೋ ಒಂದನ್ನ ರಿಲೀಸ್‌ ಮಾಡಿದ್ದಾನೆ. ಇದೇ ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರೋ ವರ್ಲ್ಡ್‌ ಕಪ್‌ ಫೈನಲ್‌ ಮ್ಯಾಚ್‌ ನಡೆಯೋಕೆ ನಾನು ಬಿಡಲ್ಲ ಅಂತ ಬೆದರಿಕೆ ಹಾಕಿದ್ದಾನೆ. ಜೊತೆಗೆ 1984ರ ಸಿಖ್‌ ವಿರೋಧಿ ದಂಗೆಗಳು ಮತ್ತು 2002ರ ಗುಜರಾತ್‌ ದಂಗೆಗಳ ಬಗ್ಗೆ ಮಾತನಾಡಿದ್ದಾನೆ. ಈ ಮೂಲಕ ಭಾರತದಲ್ಲಿರೋ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯಗಳಲ್ಲಿ ಕಿಚ್ಚು ಹಚ್ಚೋ ಪ್ರಯತ್ನ ಮಾಡಿದ್ದಾನೆ. ಅಲ್ದೆ ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ಭಾರತದ ನಿಲುವಿನ ಬಗ್ಗೆನೂ ಈ ವೀಡಿಯೋದಲ್ಲಿ ಮಾತನಾಡಿದ್ದಾನೆ. ಅಂದ್ಹಾಗೆ ಉಗ್ರ ಪನ್ನುನ್‌ ಈ ರೀತಿ ಬೆದರಿಕೆ ನೀಡಿ ವಿಡಿಯೋ ರಿಲೀಸ್‌ ಮಾಡಿರೋದು ಇದೇನು ಮೊದಲಲ್ಲ. ಕಳೆದ ತಿಂಗಳಷ್ಟೇ ಫೈನಲ್‌ ಪಂದ್ಯದ ದಿನ ಕೆನಡಾದಿಂದ ಭಾರತಕ್ಕೆ ಬರೋ ಏರ್‌ ಇಂಡಿಯಾ ವಿಮಾನಗಳನ್ನ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದ.

-masthmagaa.com

Contact Us for Advertisement

Leave a Reply