ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ !

masthmagaa.com:

ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಕಿಚ್ಚ ಸುದೀಪ್‌ ಯಾವಾಗಲೂ ಸಿನಿಮಾ ರಂಗದಲ್ಲಿ ಸಕ್ರೀಯವಾಗಿರುವ ನಟ. ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿ ಕೊಳ್ಳುವ ಈ ನಟನಿಗೆ ಲಕ್ಷಾಂತರ ಜನ ಅಭಿಮಾನಿ ಬಳಗವೇ ಇದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇದಕ್ಕೆ ಸಾಕ್ಷಿ ಎಂಬಂತೆ ಇನ್ನೊಂದಿಷ್ಟು ಫೋಟೋಸ್‌ ಮತ್ತು ವೀಡಿಯೋಗಳು ವೈರಲ್‌ ಆಗ್ತಾ ಇದೆ.

ಕ್ಯಾನ್ಸ್‌ರ್‌ನಿಂದ ಬಳಲ್ತಾ ಇದ್ದಂತ ಸಾಕ್ಷಿ ಎಂಬ ಹುಡುಗಿಗೆ ಸುದೀಪ್‌ ಅಂದ್ರೆ ಸಖತ್‌ ಫೇವರೇಟ್.‌ ಹಾಗಾಗಿ ಬೆಂಗಳೂರಿನ ‘ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ’ದಲ್ಲಿಚಿಕಿತ್ಸೆ ಪಡೆದುಕೊಳ್ತಾ ಇದ್ದಂತ ಸಾಕ್ಷಿಯನ್ನ ಸುದೀಪ್‌ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಆಟೋಗ್ರಾಫ್‌ ಕೊಟ್ಟು ಒಂದಿಷ್ಟು ಗಿಫ್ಟ್‌ಗಳನ್ನೂ ಸಹ ಕೊಟ್ಟಿದ್ದಾರೆ. ಸುದೀಪ್‌ರನ್ನ ಮೀಟ್‌ ಮಾಡಬೇಕು ಅನ್ನೋ ಸಾಕ್ಷಿಯ ಬಹುದಿನದ ಕನಸು ಈಗ ನನಸಾಗಿದೆ. ಜೊತೆಗೆ ತನಗೆ “ರನ್ನ” ಮೂವಿಯ “ಥಿತಿಲಿ” ಸಾಂಗ್‌ ನನಗೆ ಫೇವರೇಟ್‌ ಅಂತ ಸಾಕ್ಷಿ ಹೇಳಿದ್ದಾಳೆ.

-masthmagaa.com

Contact Us for Advertisement

Leave a Reply