ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ, ಇಬ್ಬರ ದುರ್ಮರಣ

ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರಿದ ಮಿಗ್-21 ಪತನಗೊಂಡಿತ್ತು. ಈಗ ಅದ್ರ ಬೆನ್ನಲ್ಲೇ ಭಾರತೀಯ ಸೇನೆಯ ತರಬೇತಿ ತಂಡದ ಹೆಲಿಕಾಪ್ಟರ್ ಭೂತಾನ್ ಬಳಿ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅರುಣಾಚಲ ಪ್ರದೇಶದ ಖಿರ್ಮುವಿನಿಂದ ಹೊರಟಿದ್ದ ಈ ವಿಮಾನ ಯೊಂಫುಲಾ ಎಂಬಲ್ಲಿ ಸಂಪರ್ಕ ಕಡಿತಗೊಂಡು ಪತನವಾಗಿದೆ. ಸಿಂಗಲ್ ಎಂಜಿನ್ ಇರುವ ಚೇತಕ್ ಹೆಲಿಕಾಪ್ಟರ್ ಇದಾಗಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಈ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿದೆ.

Contact Us for Advertisement

Leave a Reply