ಬ್ರಿಟನ್‌ ದೊರೆಯ ಹುಟ್ಟುಹಬ್ಬದಂದು ಲಾಂಚ್‌ ಆಯ್ತು ಹೊಸ ಸ್ಕೀಮ್‌!

masthmagaa.com:

ಬ್ರಿಟನ್‌ ದೊರೆ 3ನೇ ಚಾರ್ಲ್ಸ್‌ ಅವ್ರು ಹೊಸ ಆಹಾರ ಸ್ಕೀಮ್‌ ಒಂದನ್ನ ಲಾಂಚ್‌ ಮಾಡೋ ಮೂಲಕ ತಮ್ಮ 75ನೇ ಹುಟ್ಟುಹಬ್ಬವನ್ನ ನೆನ್ನೆ ಅಚರಿಸಿಕೊಂಡಿದ್ದಾರೆ. ಆಹಾರ ಕೊರತೆಯನ್ನ ನಿರ್ವಹಿಸೋದರ ಜೊತೆಗೆ ಲಕ್ಷಾಂತರ ಟನ್‌ ಆಹಾರ ವೇಸ್ಟ್‌ ಆಗೋದನ್ನ ತಡೆಯೋಕೆ, ʻಕೊರೋನೇಶನ್‌ ಫುಡ್‌ ಪ್ರಾಜೆಕ್ಟ್‌ʼ ಅನ್ನೋ ಯೋಜನೆ ಪ್ರಾರಂಭಿಸಿದ್ದಾರೆ. ಈ ಪ್ರಾಜೆಕ್ಟ್‌ ಪ್ರಕಾರ, ಬ್ರಿಟನ್‌ನಲ್ಲಿ ಸುಮಾರು 140 ಲಕ್ಷ ಜನರು ಆಹಾರ ಅಭದ್ರತೆ ಫೇಸ್‌ ಮಾಡ್ತಾ ಇದ್ದಾರೆ. ಇಲ್ಲಿನ ಹಲವಾರು ಜನರು ಜೀವನ ಸಾಗಿಸಲು ಹಾಗೂ ವೆಚ್ಚ ಭರಿಸೋಕೆ ಕಷ್ಟ ಪಡ್ತಿದ್ದು, ಪೌಷ್ಟಿಕ ಅಹಾರ ಮಿಸ್‌ ಮಾಡ್ತಾ ಇದ್ದಾರೆ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply