‘ಕ್ರಿಶ್​ 4’ ಸಿನಿಮಾ, ರಾಕೇಶ್‌ ರೋಷನ್‌ ಕೊಟ್ರು ಬಿಗ್‌ ಅಪ್ಡೇಟ್‌ ..!

masthmagaa.com:

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ʻಕ್ರಿಶ್‌ 4ʼ ಸಿನಿಮಾದ ಚಿತ್ರೀಕರಣ ಯಾವಾಗ ಶುರುವಾಗುವುದು ಎಂದು ಅಭಿಮಾನಿಗಳು ಕೇಳುತ್ತಿದ್ದರು. ನಿರ್ದೇಶಕ ರಾಕೇಶ್‌ ರೋಷನ್‌ ಈ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಮಾಹಿತಿ ಕೊಟ್ಟಿದ್ದಾರೆ. 2020 ರಿಂದ ʻಕ್ರಿಶ್‌ 4ʼ ಸಿನಿಮಾ ಸ್ಕ್ರಿಪ್ಟ್‌ ತಯಾರಾಗುತ್ತಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ಸಿನಿಮಾದ ಚಿತ್ರೀಕರಣದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ. 2024 ರ ಅಂತ್ಯದವರೆಗೂ ಶೂಟಿಂಗ್‌ ಶುರುಮಾಡುವುದಿಲ್ಲ. ಇನ್ನು ಸ್ಕ್ರಿಪ್ಟ್‌ ಪೂರ್ತಿಯಾಗಿಲ್ಲ, ಎಂದು ಹೇಳಿದರು.

ಮೊದಲ ಸಿನಿಮಾಗಳು ʻಕೋಯಿ ಮಿಲ್‌ ಗಯಾʼ, ʻಕ್ರಿಶ್‌ 2ʼ ಹಾಗೂ ʻಕ್ರಿಶ್‌ 3ʼ ಸಿನಿಮಾಗಳ ನಡುವೆ ಕೂಡ ಸಾಕಷ್ಟು ವರ್ಷಗಳ ಅಂತರವಿತ್ತು. ಇಂತಹ ಸಿನಿಮಾಗಳು ತುಂಬಾ ವಿಶೇಷ ಯಾಕೆಂದರೆ ಈ ತರಹದ ಪ್ರಯತ್ನ ಮಾಡಿರುವುದು ನಾವೇ ಮೊದಲು ಹೀಗಾಗಿ ʻಕ್ರಿಶ್‌ 4ʼ ಸಿನಿಮಾಗೂ ಇನ್ನು ಸಮಯ ಬೇಕು. ಸೂಪರ್‌ ಹೀರೋ ಕಾನ್ಸೆಪ್ಟ್‌ ಇರೋ ಈ ಸಿನಿಮಾಕ್ಕೆ ಬಹಳಷ್ಟು ತಯಾರಿಬೇಕು ಎಂದು ರಾಕೇಶ್‌ ರೋಷನ್‌ ಸಿನಿಮಾದ ಆಪ್ಡೇಟ್‌ ಕೊಟ್ಟಿದ್ದಾರೆ. ʻಕೋಯಿ ಮಿಲ್‌ ಗಯಾʼ, ʻಕ್ರಿಶ್‌ 2ʼ ಹಾಗೂ ʻಕ್ರಿಶ್‌ 3ʼ ಮಗನ ಈ ಮೂರು ಸಿನಿಮಾಗಳನ್ನ ರಾಕೇಶ್‌ ರೋಷನ್‌ ನಿರ್ದೇಶನ ಮಾಡಿದ್ದಾರೆ. ಆದರೆ ʻಕ್ರಿಶ್‌ 4ʼ ಸಿನಿಮಾವನ್ನ ಇವರು ನಿರ್ದೇಶನ ಮಾಡುವುದಿಲ್ಲ ಎನ್ನಲಾಗುತ್ತಿದೆ. ರಾಕೇಶ್ ರೋಷನ್​ಗೆ ಈಗ 73 ವರ್ಷ ವಯಸ್ಸು. ಅವರು ಕ್ಯಾನ್ಸರ್ ಕೂಡ ಗೆದ್ದು ಬಂದಿದ್ದಾರೆ. ಈ ವಯಸ್ಸಿನಲ್ಲಿ ಆ್ಯಕ್ಷನ್ ಸಿನಿಮಾ ನಿರ್ದೇಶನ ಮಾಡೋದು ಒಂದು ಚಾಲೆಂಜ್. ಈ ರೀತಿಯ ಸಿನಿಮಾ ಮಾಡೋಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಆರೋಗ್ಯದ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿರುವುದರಿಂದ ಈ ಸಿನಿಮಾ ನಿರ್ದೇಶನ ಸಾಧ್ಯವಿಲ್ಲ. ಹೀಗಾಗಿ, ಅವರು ನಿರ್ಮಾಣದಲ್ಲಿ ಮಾತ್ರ ತೊಡಗಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ‘ಕ್ರಿಶ್ 4’ ಚಿತ್ರವನ್ನ ಆ್ಯಕ್ಷನ್ ಸಿನಿಮಾಗಳ ಯಶಸ್ವಿ ನಿರ್ದೇಶಕ ಸಿದ್ದಾರ್ಥ್ ಆನಂದ್‌ ನಿರ್ದೇಶನ ಮಾಡಿದರೆ ಉತ್ತಮ ಎನ್ನುವ ಅಭಿಪ್ರಾಯ ರಾಕೇಶ್ ರೋಷನ್‌ ಹೊಂದಿದ್ದಾರೆ.

ಸದ್ಯ ಹೃತಿಕ್ ರೋಷನ್‌ ‘ಫೈಟರ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಈ ಸಿನಿಮಾದಲ್ಲಿ ಮೊದಲಬಾರಿಗೆ ದೀಪಿಕಾ ಪಡುಕೋಣೆ, ಹೃತಿಕ್‌ ರೋಷನ್‌ಗೆ ಜೋಡಿಯಾಗಿದ್ದಾರೆ. ಈ ಚಿತ್ರವು ಜನವರಿ 2024 ರಲ್ಲಿ ತೆರೆಕಾಣಲಿದೆ. ಇದರ ಜೊತೆಗೆ ಹೃತಿಕ್‌, ಅಯಾನ್‌ ಮುಖರ್ಜಿ ನಿರ್ದೇಶನದ ʻವಾರ್‌ 2ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಲ್ಟಿಸ್ತಾರರ್‌ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಜೊತೆ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply