ನಮಗೂ ಉಚಿತ ಬಸ್‌ ಪ್ರಯಾಣ ಬೇಕು: ನಿವೃತ್ತ ಸಾರಿಗೆ ನೌಕರರು

masthmagaa.com:

ರಾಜ್ಯ ವಿಧಾನಸಭಾ ಚುನಾವಣಾ ವೇಳೆ ಕಾಂಗ್ರೆಸ್‌ ನೀಡಿದ್ದ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಿಸಲಾಗಿದೆ. ಇನ್ನೇನು ಜೂನ್‌ 11ರಿಂದ ಈ ಯೋಜನೆ ಜಾರಿಯಾಗಲಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದ್ದು ಪುರುಷರು ಕೂಡ ತಮಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು ಅಂತ ಬೇಡಿಕೆ ಇಡುತ್ತಿದ್ದಾರೆ. ಜೊತೆಗೆ ಸಾರಿಗೆ ನಿಗಮಗಳ ‌ನಿವೃತ್ತಿ ನೌಕರರಿಂದಲೂ ಉಚಿತ ಪ್ರಯಾಣಕ್ಕೆ ಆಗ್ರಹ ಕೇಳಿ ಬಂದಿದೆ. 35-40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ ವಾರ್ಷಿಕವಾಗಿ 500ರೂ.ಯನ್ನ ಸಾರಿಗೆ ನಿಗಮಗಳು ವಸೂಲಿ ಮಾಡುತ್ತವೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ 4 ನಿಗಮಗಳ ನಿವೃತ್ತಿ ನೌಕರರ ಪತಿ ಅಥ್ವಾ ಪತ್ನಿಗೆ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಅಂತ KSRTC ಸ್ಟಾಫ್‌ ಆಂಡ್‌ ವರ್ಕರ್ಸ್‌ ಫೆಡರೇಶನ್‌ ಸಿಎಂ ಸಿದ್ದರಾಮಯ್ಯ ಅವ್ರಿಗೆ ಪತ್ರ ಬರೆದು ಮನವಿ ಮಾಡಿದೆ.

-masthmagaa.com

Contact Us for Advertisement

Leave a Reply