ಗ್ರಾಹಕರ ಪಾರ್ಸಲ್‌ ತಲುಪಿಸೋಕೆ ಟ್ರಕ್‌ ಖರೀದಿಸಿದ KSRTC !

masthmagaa.com:

ರಾಜ್ಯ ಸಾರಿಗೆ ಸಂಸ್ಥೆ KSRTC ತನ್ನ ಆದಾಯ ಹೆಚ್ಚಿಸೋಕೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪಾರ್ಸಲ್‌ ಸಾಗಾಟಕ್ಕೆ 20 ಟ್ರಕ್‌ಗಳನ್ನ ಖರೀದಿಸಿದ್ದು, ಡಿಸೆಂಬರ್‌ 15ರ ಒಳಗೆ ಕಾರ್ಯಾಚರಣೆ ಪ್ರಾರಂಭಿಸಲಿವೆ ಅಂತ KSRTC ಹೇಳಿದೆ. ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆರಿಸಲಾಗಿದ್ದು, ಟಾಟಾ ಕಂಪನಿಯ ಪುಣೆ ಬ್ರಾಂಚ್‌ನಲ್ಲಿ ಈ ಟ್ರಕ್‌ಗಳು ತಯಾರಾಗುತ್ತಿವೆ. ಸದ್ಯ 20 ಟ್ರಕ್‌ಗಳು ಇನ್ನೊಂದು ತಿಂಗಳ ಒಳಗೆ KSRTCಗೆ ಬರಲಿವೆ. ಇದೇ ಮೊದಲ ಬಾರಿಗೆ ಟ್ರಕ್‌ಗಳನ್ನು ಖರೀದಿಸಿ ಪಾರ್ಸೆಲ್ ಸಾಗಾಟ ಆರಂಭಿಸಲಾಗುತ್ತಿದ್ದು, ಜನರು ಉತ್ತಮ ಸ್ಪಂದನೆ ನೀಡಲಿದ್ದಾರೆ ಅನ್ನೊ ನಂಬಿಕೆ ನಮಗಿದೆ ಅಂತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್‌ಗಳು ಪಾರ್ಸೆಲ್ ಒಯ್ಯಲಿವೆ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply