ನಾನೇನು ಗಿಣಿ ಅಲ್ಲ..! `ಟಗರು’ಗೆ ಗುಮ್ಮಿದ `ಜೋಡೆತ್ತು’..!

ಉಪಚುನಾವಣೆ ಹೊತ್ತಲ್ಲೇ ಟಗರು ಮತ್ತು ಜೋಡೆತ್ತು ಕಾಳಗ ಶುರುವಾಗಿದೆ. ಹದ್ದಿಗೆ ಹೋಲಿಸಿರುವ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ನಾನೇನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ. ಸಿದ್ದರಾಮಯ್ಯನವರಿಂದ ನಾನೇನು ಬೆಳೆದಿಲ್ಲ. ರಾಮನಗರ ಜಿಲ್ಲೆಯ ಜನ ನನ್ನನ್ನು ಬೆಳೆಸಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ ದೇವೇಗೌಡರು ಸಿದ್ದರಾಮಯ್ಯನವರಂತಹ ಸಾಕಷ್ಟು ಗಿಣಿಗಳನ್ನ ಬೆಳೆಸಿದ್ದಾರೆ. ಆದ್ರೆ ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ. ನಾನು ಸಿದ್ದರಾಮಯ್ಯ ಅವರಿಂದ ಸಿಎಂ ಆಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಆಗಿದ್ದೆ. ಅದನ್ನ ಸಿದ್ದರಾಮಯ್ಯನರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ದೋಸ್ತಿ ಸರ್ಕಾರವನ್ನು ಕೆಡವೋಕೆ ಮುಂದಾದ್ರು. ನಾವಾದರೂ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಬೆಳೆಸಿದ್ದೇವೆ. ಆದ್ರೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನ ಧಾರೆ ಎರೆಸಿಕೊಂಡು ಬೆಳೆದವರು ಅಂತ ಕುಟುಕಿದ್ದಾರೆ. ಅವರಿಗೆ ತಾಕತ್ ಇದ್ರೆ ಕಾಂಗ್ರೆಸ್ ಬಿಟ್ಟು ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ ಎಂದು ಸವಾಲ್ ಎಸೆದಿದ್ದಾರೆ. 4 ದಶಕಗಳ ರಾಜಕೀಯ ಒಡನಾಟ ಅನುಭವದ ನಂತರವೂ ಹದ್ದುನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಅದು ಕುಕ್ಕದೇ ಬಿಡುತ್ತಾ?, ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ ಎಂದು ಇವತ್ತು ಬೆಳಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

Contact Us for Advertisement

Leave a Reply