ಚುನಾವಣಾ ಆಯೋಗದ ವಿರುದ್ಧ ಕೈ-ದಳ ಕೆಂಡ..!

ಕರ್ನಾಟಕದಲ್ಲಿ ಉಪಚುನಾವಣೆಗೆ ಹೊಸ ಮಹೂರ್ತ ಫಿಕ್ಸ್ ಆಗಿದೆ. ಇದು ರಾಜ್ಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಚುನಾವಣಾ ಆಯೋಗದ ವಿರುದ್ಧ ಕುಮಾರಸ್ವಾಮಿ ಉರಿದು ಬಿದ್ದಿದ್ದಾರೆ. ಸಾಂವಿಧಾನಿಕ ಸಂಸ್ಥೆಯೊಂದು ಇಷ್ಟೊಂದು ಗೊಂದಲದಲ್ಲಿ ಕಾರ್ಯ ನಿರ್ವಹಿಸೋದ್ರ ಹಿಂದಿನ ಮರ್ಮವೇನು..? ಇಂತಹ ಗೊಂದಲಗಳಿಂದ ಕೂಡಿದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಸಾಂವಿಧಾನಿಕ ಸಂಸ್ಥೆ ಹೀಗೆ ವರ್ತಿಸೋದು ಸರಿಯಲ್ಲ ಎಂದು ಕೆಂಡಕಾರಿದ್ದಾರೆ. ಸಿದ್ದರಾಮಯ್ಯ ಕೂಡ ಚುನಾವಣಾ ಆಯೋಗದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಯಾಕೆ ಹೀಗೆ ಮಾಡ್ತಿದ್ಯೋ ಗೊತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ, ದಿಢೀರ್ ಅಂತ ಚುನಾವಣೆ ಘೋಷಣೆ ಮಾಡಿರೋದು ಯಾಕೆ..? ಚುನಾವಣಾ ಆಯೋಗ ಕೇಂದ್ರದ ಅಣತಿಯಂತೆ ಕಾರ್ಯನಿರ್ವಹಿಸ್ತಿದೆ ಅಂತ ಕಿಡಿಕಾರಿದ್ದಾರೆ.

Contact Us for Advertisement

Leave a Reply