ಇಂಡೋ-ಚೀನಾ ಗಡಿಯಲ್ಲಿ ಧೈರ್ಯ ಮೆರೆದ ಭಾರತೀಯ ಕುರಿಗಾಯಿಗಳು!

masthmagaa.com:

ಇಂಡೋ-ಚೀನಾ ಗಡಿಯಲ್ಲಿ ಸದಾ ಕ್ಯಾತೆ ತೆಗೆಯೋ ಚೀನಾ ಸೈನಿಕರ ಮುಂದೆ ಇದೀಗ ಭಾರತೀಯ ಕುರಿಗಾಯಿಗಳು ಎದೆ ತಟ್ಟಿ ನಿಂತಿದ್ದಾರೆ. ಲಡಾಖ್‌ನ ಕುರಿಗಾಯಿ ಗುಂಪು ಮತ್ತು ಚೀನಾ ಸೈನಿಕರು, ಗಡಿಭಾಗದಲ್ಲಿ ಮುಖಾಮುಖಿಯಾಗಿರೋ ವಿಚಾರ ವರದಿಯಾಗಿದೆ. 2020ರ ಗಲ್ವಾನ್‌ ಸಂಘರ್ಷದ ನಂತ್ರ ಲಡಾಖ್‌ನ ಕುರಿಗಾಯಿಗಳು ಇಂಡೋ-ಚೀನಾ ಗಡಿಯಲ್ಲಿ ಕುರಿ ಮೇಯಿಸೋದನ್ನ ನಿಲ್ಲಿಸಿದ್ರು. ಆದ್ರೆ ಇದೀಗ ಮೂರು ವರ್ಷಗಳ ನಂತ್ರ ಕುರಿ ಮೇಯಿಸೋಕೆ ಪುನಃ ಸ್ಟಾರ್ಟ್‌ ಮಾಡಿದ್ದಾರೆ. ಪಾಂಗ್‌ಯೋಂಗ್‌ ಸರೋವರದ ಉತ್ತರ ತೀರದ ಹುಲ್ಲುಗಾವಲಿಗೆ ಮತ್ತೆ ಲಗ್ಗೆಯಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಚೀನಾ ಸೈನಿಕರು ಈ ಕುರಿಗಾಯಿಗಳನ್ನ ಅಡ್ಡಗಟ್ಟಿದ್ದಾರೆ. ಆದ್ರೆ ಇದಕ್ಕೆ ಭಯ ಪಡದ ಕುರಿಗಾಯಿಗಳು ಚೀನಾ ಸೈನಿಕರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಕುಂತ್ರೆ ಕುರುಬ ನಿಂತ್ರೆ ಕಿರುಬ ಅನ್ನೋ ತರ ಮಾತಿಕೆ ಮರುಮಾರು ಹಾಕಿ ವಾದಿಸಿದ್ದಾರೆ. ಯಾಕ್ರೀ ಕುರಿ ಮೇಯಿಸ್ಬಾದು ಅಂತ ಪ್ರಶ್ನೆ ಮಾಡಿದ್ದಾರೆ. ʻನಾವು ಭಾರತದಲ್ಲೇ ಇದ್ದೇವೆ… ನಮ್ಮನ್ಯಾಕೆ ತಡೀತಿದ್ದೀರಾ… ನಾವ್ಯಾಕೆ ಇಲ್ಲಿಗ್‌ ಬರ್ಬಾರ್ದು?ʼ ಇದು ಕುರಿಗಾಯಿಗಳ ಹುಲ್ಲುಗಾವಲು. ನಾವಿಲ್ಲೇ ಕುರಿ ಮೇಯಿಸ್ತೀವಿ ಅಂತ ಪಾಯಿಂಟ್‌ ಹಾಕಿದ್ದಾರೆ. ಅಲ್ಲದೆ PLA ಸೈನಿಕರ ಜೊತೆಗಿನ ಈ ಮಾತಿನ ಚಕಮಕಿಯ ವೀಡಿಯೋವನ್ನೂ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗ್ತಿದೆ. ಹೆಚ್ಚಿನವ್ರು ಕುರಿಗಾಯಿಗಳ ಧೈರ್ಯ ಮೆಚ್ಚಿ ಕಮೆಂಟ್‌ ಮಾಡ್ತಿದ್ದಾರೆ. ಈ ಕುರಿತು ಲಡಾಖ್‌ನ ಚುಶುಲ್‌ ಕೌನ್ಸಿಲರ್‌ ವಿಡಿಯೋ ಶೇರ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಇವ್ರು ನಮ್ಮ ದೇಶದ ಎರಡನೇ ರಕ್ಷಣಾ ಪಡೆʼ ಅಂತ ಕರೆದಿದ್ದಾರೆ. ಅಂದ್ಹಾಗೆ ಈ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಕುರಿಗಾಯಿಗಳ ಸಂಬಂಧ ಬಹಳ ಚೆನ್ನಾಗಿದೆ. 1999ರ ಕಾರ್ಗಿಲ್‌ ಯುದ್ಧದ ಟೈಮಲ್ಲಿ ಕುರಿಗಾಯಿಗಳೇ ಇಂಡಿಯನ್‌ ಆರ್ಮಿಗೆ ಇಂಟಲಿಜಜೆನ್ಸ್‌ ಮಾಡಿತಿ ನೀಡಿದ್ದು. 1999, ಮೇ 3ರಂದು ತಾಶಿ ನಾಮ್ಗ್ಯಾಲ್‌ ಅನ್ನೋ ಕುರಿಗಾಯಿ, ಕಾರ್ಗಿಲ್‌ನಲ್ಲಿ ಪಾಕ್‌ ಆರ್ಮಿ ಮೂಮೆಂಟ್ಸ್‌ ಬಗ್ಗೆ ಮಾಹಿತಿ ನೀಡಿದ್ರು. ಇವ್ರು ತಮ್ಮ ಕಳೇದೋದ ಯಾಕ್‌ ಅಥ್ವಾ ಕೋಣವನ್ನ ಹುಡುಕಿ ಹೋದಾಗ, ಆರು ಜನ ಪಾಕ್‌ ಸೈನಿಕರು ಬಂಕರ್‌ ನಿರ್ಮಾಣ ಮಾಡ್ತಿದ್ದನ್ನ ನೋಡಿದ್ರು. ಆಮೇಲೆ ಸೈಲೆಂಟಾಗಿ ವಾಪಸ್‌ ಬಂದು ಇಂಡಿಯನ್‌ ಆರ್ಮಿ ಸೈನಿಕರಿಗೆ ಮಾಹಿತಿ ನೀಡಿದ್ರು. ಆ ಮಾಹಿತಿಯಿಂದ್ಲೇ ಚುರುಕಾಗಿ ಸೇನೆ ನಿಯೋಜಿಸೋಕೆ, ಕಾರ್ಯಾಚರಣೆ ಕೈಗೊಳ್ಳೋಕೆ ಹೆಲ್ಪ್‌ ಆಯ್ತು. ಬಹಳಷ್ಟು ಅನಾಹುತ ಆಗೋದು ತಪ್ತು.

ಇನ್ನು ಈ ಚೀನಾ ಇತರೆ ದೇಶಗಳಲ್ಲಿ ಬೇಹುಗಾರಿಕೆ ನಡೆಸೋಕೆ ವಿಚಿತ್ರವಾದ ಕುತಂತ್ರಗಳನ್ನ ಹೂಡುತ್ತೆ ಅನ್ನೋದು ಗೊತ್ತಿರೋ ವಿಷ್ಯಾನೇ. ಹೀಗಾಗಿ ಚೀನಾ ಬೆಹುಗಾರಿಕೆಗಾಗಿ ಪಾರಿವಾಳವನ್ನ ಬಳಸಿರೋ ಶಂಕೆ ಮೇರೆಗೆ 8 ತಿಂಗಳ ಹಿಂದೆ ಒಂದು ಪಾರಿವಾಳವನ್ನ ಬಂಧಿಸಿ ಇಡಲಾಗಿತ್ತು. ಇದೀಗ ಅದೇ ಪಾರಿವಾಳವನ್ನ ಮುಂಬೈನಲ್ಲಿ ಫ್ರೀ ಆಗಿ ಹಾರಾಡಲು ರಿಲೀಸ್‌ ಮಾಡಲಾಗಿದೆ. ಅಂದ್ಹಾಗೆ ಶಂಕೆ ಮೇರೆಗೆ ಬಂಧಿಸಲಾದ ಈ ಪಾರಿವಾಳದ ಕಾಲಿನಲ್ಲಿ ಎರಡು ಉಂಗುರಗಳನ್ನ ತೊಡಿಸಲಾಗಿತ್ತು. ಈ ಉಂಗುರದಲ್ಲಿ ಚೈನೀಸ್‌ ಭಾಷೆಯ ಅಕ್ಷರಗಳಲ್ಲಿ ಏನೋ ಬರೆದುಕೊಂಡಿತ್ತಂತೆ. ಆದ್ರಿಂದ ಪೊಲೀಸರು ಈ ಪಾರಿವಾಳ ವಿರುದ್ಧ ಕೇಸ್‌ ದಾಖಲಿಸಿದ್ರು. ನಿಜ. ಪಾರಿವಾಳದ ವಿರುದ್ಧ ಗೂಢಾಚಾರಿ ಕೇಸ್‌ ದಾಖಲಿಸಲಾಗಿತ್ತು. ಆದ್ರೆ ತನಿಖೆ ವೇಳೆ ಈ ಪಾರಿವಾಳ ತೈವಾನ್‌ನ ರೇಸಿಂಗ್‌ ಈವೆಂಟ್‌ಗಳಲ್ಲಿ ಭಾಗವಹಿಸ್ತಿತ್ತು. ಮಿಸ್ಸಾಗಿ ಭಾರತಕ್ಕೆ ಹಾರಿ ಬಂದಿತ್ತು ಅನ್ನೋ ಮಾಹಿತಿ ಸಿಕ್ಕ ನಂತ್ರ ಕೇಸ್‌ನ್ನ ಡ್ರಾಪ್‌ ಮಾಡಲಾಗಿತ್ತು. ಇದೀಗ ಪಾರಿವಾಳವನ್ನ ರಿಲೀಸ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply