BIG NEWS: CD ಯುವತಿಯಿಂದ ದೂರು, ರಮೇಶ್ ಜಾರಕಿಹೊಳಿಗೆ ಸಂಕಷ್ಟ!

masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋದಲ್ಲಿ ಕಾಣಿಸಿಕೊಂಡಿರೋ ಯುವತಿ ಇವತ್ತು ಮೂರನೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಕಂಪ್ಲೇಂಟ್ ಕೊಡುತ್ತೇನೆ ಅಂತ ಹೇಳಿದ್ದಾಳೆ. ‘ಕರ್ನಾಟಕದ ಎಲ್ಲಾ ತಂದೆ, ತಾಯಿಯ ಆಶೀರ್ವಾದದಿಂದ, ಎಲ್ಲಾ ಪಕ್ಷದ ನಾಯಕರು ಮತ್ತು ಎಲ್ಲಾ ಸಂಘಟನೆಯವರು ನನ್ನನ್ನ ತುಂಬಾ ಬೆಂಬಲಿಸುತ್ತಿದ್ದೀರಿ. ಇಷ್ಟುದಿನ (24 ದಿನ) ನಾನು ಜೀವ ಭಯದಲ್ಲಿ ಬದುಕುತ್ತಿದ್ದೆ. ಆದ್ರೆ ಎಲ್ಲೋ ಒಂದುಕಡೆ ಇವತ್ತು ನನಗೆ ಧೈರ್ಯ ಬಂದಿದೆ. ಎಲ್ಲರೂ ನನ್ನನ್ನ ಬೆಂಬಲಿಸುತ್ತಿದ್ದೀರಿ ಅನ್ನೋ ಕಾರಣಕ್ಕೆ ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತಿದ್ದೇನೆ’ ಅಂತ ಹೇಳಿದ್ದಾಳೆ.

ಈ ಬಗ್ಗೆ ಮಾತನಾಡಿರೋ ಯುವತಿ ಪರ ವಕೀಲರಾದ ಜಗದೀಶ್, ‘ಆಕೆಯ ದೂರಿನ ಸಂಪೂರ್ಣ ವಿವರವನ್ನ ಈಗ ಹೇಳೋಕೆ ಆಗಲ್ಲ. ಇಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್​ಗೆ ದೂರಿನ ಪ್ರತಿ ಕೊಡ್ತೀವಿ. ಆಮೇಲೆ ಬೇಕಿದ್ರೆ ಕಮಿಷನರ್​ರಿಂದ ನೀವು ವಿವರ ಪಡೆಯಬಹುದು. ತಾನು ಸಂತ್ರಸ್ತೆ ಅನ್ನೋದೇ ಆಕೆಯ ದೂರಿನ ಪ್ರಮುಖ ಅಂಶ. ಆಕೆಯ ದೂರು ರಾಜ್ಯದ ಪ್ರಭಾವಶಾಲಿ ವ್ಯಕ್ತಿ ವಿರುದ್ಧ ಆಗಿರೋದ್ರಿಂದ ನಮ್ಮ ಮೂಲಕ ದೂರು ದಾಖಲಿಸುತ್ತಿದ್ದಾಳೆ. ಎರಡ್ಮೂರು ದಿನದಲ್ಲಿ ಆಕೆ ಕೂಡ ಎಲ್ಲರ ಮುಂದೆ ಬರಬಹುದು’ ಅಂತ ಹೇಳಿದ್ದಾರೆ.

ಇಷ್ಟುದಿನ ದೂರು ಕೊಡಲು ಹಿಂದೇಟು ಹಾಕಿದ್ದ ಯುವತಿ ಈಗ ರಮೇಶ್ ಜಾರಕಿಹೊಳಿ ವಿರುದ್ಧ ಕಂಪ್ಲೇಂಟ್ ಕೊಡಲು ಮುಂದಾಗಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಜೊತೆಗೆ, ಕೆಲಸ ಕೊಡಿಸೋದಾಗಿ ಹೇಳಿ ರಮೇಶ್ ಜಾರಕಿಹೊಳಿ ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಿದ್ದ ಯುವತಿ, ದೂರಿನಲ್ಲಿ ಅದನ್ನೇ ಉಲ್ಲೇಖ ಮಾಡ್ತಾರಾ ಅಥವಾ ಇನ್ನೇನಾದ್ರೂ ವಿಚಾರಗಳನ್ನ ಬಿಚ್ಚಿಡ್ತಾರಾ ಅನ್ನೋದನ್ನ ಕಾದು ನೋಡ್ಬೇಕು. ಆದ್ರೆ ರಮೇಶ್ ಜಾರಕಿಹೊಳಿ ನಾನೇನು ತಪ್ಪೇ ಮಾಡಿಲ್ಲ, ವಿಡಿಯೋದಲ್ಲಿರೋದು ನಾನಲ್ಲ, ಇದೆಲ್ಲಾ ಷಡ್ಯಂತ್ರ ಅಂತ ತಮ್ಮ ವಿರುದ್ಧದ ಆರೋಪಗಳನ್ನ ತಳ್ಳಿ ಹಾಕುತ್ತಾ ಬಂದಿದ್ದಾರೆ.

-masthmagaa.com

Contact Us for Advertisement

Leave a Reply