ಡಿಕೆಶಿ ಕೇಸಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಯಾಕೆ ರುಬ್ಬಿಂಗ್?

ಇಡಿ ಅಧಿಕಾರಿಗಳ ಡಿಕೆಶಿ ಕೇಸ್ ತನಿಖೆ ಬೆಳಗಾವಿ ಗ್ರಾಮಾಂತರ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಕುತ್ತಿಗೆ ಸುತ್ತಲೂ ಸುತ್ತಿಕೊಳ್ಳುತ್ತಿದೆ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿರುವ ತಪ್ಪೇನು? ಡಿಕೆಶಿ ವಿರುದ್ಧ ನಡೆಯುತ್ತಿರುವ ತನಿಖೆಗೂ, ಲಕ್ಷ್ಮೀ ಹೆಬ್ಬಾಳ್ಕರ್ ಗೂ ಏನು ಸಂಬಂಧ..? ಎಲ್ಲವನ್ನೂ ಹೇಳುತ್ತೇವೆ ನೋಡಿ..

ಜಾರಿ ನಿರ್ದೇಶನಾಲಯ ಅಥವಾ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಅವರ ಇಡೀ ಸಾಮ್ರಾಜ್ಯವನ್ನೇ ಜಾಲಾಡುತ್ತಿದ್ದಾರೆ. ಅದರ ಪರಿಣಾಮ ಡಿಕೆಶಿ ಆಪ್ತರ ಸಾಮ್ರಾಜ್ಯಗಳ ಮೇಲೆ ಆಗುತ್ತಿದೆ. ಡಿಕೆ ಶಿವಕುಮಾರ್ ಅವರ 184 ಆಪ್ತರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. 184 ಜನರಲ್ಲಿ ಒಬ್ಬರು ಈ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಒಬ್ಬರು.

ಲಕ್ಷ್ಮೀ ಹೆಬ್ಬಾಳ್ಕರ್!
ಲಕ್ಷ್ಮಿ ಹೆಬ್ಬಾಳ್ಕರ್ ಇಡೀ ಜೀವನದ ಕಂಪ್ಲೀಟ್ ಸ್ಟೋರಿಯನ್ನು ಇನ್ನೊಂದು ವಿಡಿಯೋದಲ್ಲಿ ನಾವು ಆಲ್ರೆಡಿ ನಿಮಗೆ ತೋರಿಸಿದ್ದೇವೆ. ಮಸ್ತ್ ಮಗಾ ಚಾನಲ್ ಗೆ ಹೋಗಿ ಅದನ್ನು ನೀವು ನೋಡಬಹುದು. ಈಗ ಈ ಕೇಸಲ್ಲಿ ಡಿಕೆಶಿ ವಿಲವಿಲ ಒದ್ದಾಡುತ್ತಿರುವಾಗ, ಲಕ್ಷ್ಮಿಗೂ ತನಿಖೆ ಬಂದು ಟಚ್ ಆಗಿರುವುದು ಯಾಕೆ ಅಂತ ನೋಡೋಣ.

ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜು..!
ಲಕ್ಷ್ಮಿ ಹೆಬ್ಬಾಳ್ಕರ್ ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರು. ಡಿಕೆ ಶಿವಕುಮಾರ್ ಬಂಧನ ಆದಾಗ ದೇಶದಲ್ಲಿ ದೊಡ್ಡ ದುರಂತ ಆಗಿ ಹೋಯಿತು ಅನ್ನುವ ರೀತಿಯಲ್ಲಿ ಫೇಸ್ಬುಕ್ ಪೋಸ್ಟ್ ಹಾಕಿದ್ದರು ಲಕ್ಷ್ಮಿ ಹೆಬ್ಬಾಳ್ಕರ್. ತೀವ್ರವಾಗಿ ಡಿಕೆಶಿ ಬಂಧನವನ್ನು ಪ್ರತಿಭಟಿಸಿ ಬರೆದಿದ್ದರು. ಅಂದರೆ ಡಿಕೆಶಿ ಬಂಧನ ಆಗಿದ್ದು ಲಕ್ಷ್ಮಿ ಹೆಬ್ಬಾಳ್ಕರ್ಗೆ ಬಹಳ ಬೇಜಾರು ಉಂಟುಮಾಡಿತ್ತು ಅನ್ನೋದು ಇಲ್ಲಿ ಎದ್ದು ಕಾಣುತ್ತದೆ. ಯಾಕಂದ್ರೆ ಡಿ.ಕೆ.ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಒಂದು ರೀತಿ ರಾಜಕೀಯ ಶಕ್ತಿಯನ್ನು ಕೊಟ್ಟವರು. ಅದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜು ಕೊಟ್ಟಿರುವ ಈ ಹೇಳಿಕೆಯೇ ಸಾಕ್ಷಿ.

`ಡಿ.ಕೆ. ಶಿವಕುಮಾರ್ ನನಗೂ ನನ್ನ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಮಾರ್ಗದರ್ಶಕರು. ಗಾಡ್ ಫಾದರ್ ಅಂದರೂ ತಪ್ಪಲ್ಲ. ಆದ್ರೆ ನಮ್ಮ ನಡುವೆ ಕೇವಲ ರಾಜಕೀಯ ಸಂಬಂಧ ಮಾತ್ರ ಇದೆ. ಬೇರೆ ಯಾವುದೇ ರೀತಿಯ ಸಂಬಂಧ ಇಲ್ಲ’
– ಚನ್ನರಾಜು, ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ

ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜು ಮಾತನ್ನ. ಇಲ್ಲೇ ಇರುವುದು ಮಜಾ. ಲಕ್ಷ್ಮಿ ಹೆಬ್ಬಾಳ್ಕರ್ ಇಡಿ ಮುಂದೆ ಹೋಗೋಕೆ ಇದೇ ಚನ್ನರಾಜು ಕಾರಣ ಎನ್ನಲಾಗುತ್ತಿದೆ. ಅಂದರೆ ಕಳೆದ 10 ವರ್ಷಗಳಿಂದ ಇದೇ ಚನ್ನರಾಜು, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಇದೇ ಚನ್ನರಾಜು. ಡಿಕೆಶಿಯ ಬೇನಾಮಿಯಾಗಿ ವ್ಯವಹಾರ ಮಾಡುತ್ತಿದ್ದಾರೆ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಬಂದಿದೆಯಂತೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಶುಗರ್ ಫ್ಯಾಕ್ಟರಿಗೆ ಸಂಬಂಧಪಟ್ಟ ಹಾಗೆ ಪಣಜಿಯ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾಗ ದೊಡ್ಡ ಪ್ರಮಾಣದಲ್ಲಿ ಬೇನಾಮಿ ಆಸ್ತಿ ಸೀಝ್ ಆಗಿದೆ ಎನ್ನಲಾಗಿದೆ. ಅದರ ಬಗ್ಗೆ ಮತ್ತಷ್ಟು ಕೆದಕಿದಾಗ ಡಿ.ಕೆ.ಶಿವಕುಮಾರ್ ಅವರಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಚನ್ನರಾಜು ಅವರಿಗೂ ಬಹಳ ಬೇನಾಮಿ ಡೀಲ್ ಗಳು ನಡೆದಿದೆ ಎನ್ನುವ ಅನುಮಾನ ಅಧಿಕಾರಿಗಳಿಗೆ ಬಲವಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಕೇಳಿದ್ರೆ..? ನನಗೆ ಲಕ್ಷ್ಮೀ ಹೆಬ್ಬಾಳ್ಕರ್ ಗೊತ್ತು. ಅವರ ಸಹೋದರ ಚನ್ನರಾಜು ಕೂಡ ಗೊತ್ತು. ಅವರೆಲ್ಲ ನನಗೆ ಒಳ್ಳೆಯ ಫ್ರೆಂಡ್ಸ್ ಅಷ್ಟೇ. ಬೇರೆ ಯಾವುದೇ ಸಂಬಂಧ ಇಲ್ಲ. ಅವರ ಜೊತೆ ನನಗೆ ಯಾವುದೇ ವ್ಯವಹಾರವೂ ಇಲ್ಲ ಅಂತಾ ಹೇಳಿದ್ದಾರಂತೆ.

ಆದ್ರೆ ಇಡಿ ಅಧಿಕಾರಿಗಳು ಡಿಕೆಶಿಯ ಈ ಮಾತನ್ನು ನಂಬಲು ತಯಾರಿಲ್ಲ. ಇದೇ ಕಾರಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಗೂ ಈಗ ತನಿಖೆಯ ಬಿಸಿ ತಾಗುತ್ತಿದೆ. ಈ ಹಿಂದೆ ಬೆಳಗಾವಿಯಲ್ಲಿ ಮೊದಮೊದಲು ತಾವೇ ಬೆಳೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಬ್ರದರ್ಸ್ ಒಂದಾಗಿ ಯುದ್ಧಕ್ಕೆ ನಿಂತಾಗಲೇ ಅನುಮಾನ ಬಂದಿತ್ತು. ಯಾಕಂದ್ರೆ ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ಅಖಾಡಕ್ಕೆ ಇಳಿದಿದ್ದು ಇದೆ ಡಿಕೆ ಶಿವಕುಮಾರ್. ಆಪ್ತರು ಅನ್ನೋ ಕಾರಣಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರನ ಹೆಸರಿನಲ್ಲಿದ್ದ ತಮ್ಮ ಬೇನಾಮಿ ಸಾಮ್ರಾಜ್ಯವನ್ನು ಉಳಿಸಿಕೊಳ್ಳುವ ಸಲುವಾಗಿಯೇ ಡಿ.ಕೆ.ಶಿವಕುಮಾರ್ ಬೆಳಗಾವಿ ರಾಜಕೀಯದ ಬೆಂಕಿಗೆ ಕೈ ಹಾಕಿದ್ದರು ಅಂತ ಈಗ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಆದರೆ ಸದ್ಯಕ್ಕೆ ಎಲ್ಲಾ ಆರೋಪಗಳು ತನಿಖೆಯ ಹಂತದಲ್ಲಿವೆ. ಇಡಿ ಅಧಿಕಾರಿಗಳು ಈ ಎಲ್ಲಾ ಆರೋಪಗಳಿಗೆ ಸಾಕ್ಷಗಳನ್ನು ಹುಡುಕಿ ತೋರಿಸಬೇಕಿದೆ. ಅದೇ ಕಾರಣಕ್ಕೆ ಇಡೀ ಡಿಕೆಶಿ ಸಾಮ್ರಾಜ್ಯದ ಎಲ್ಲರನ್ನೂ ಹಿಡಿದು ಅಲ್ಲಾಡಿಸುತ್ತದೆ ಇಡಿ.

Contact Us for Advertisement

Leave a Reply