ಲಕ್ಷ್ಮೀ ಹೆಬ್ಬಾಳ್ಕರ್ ಯಾರು..? ಇತಿಹಾಸ ಗೊತ್ತಾ..?

ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ಆಸ್ತಿ ಪ್ರಕರಣಗಳಲ್ಲಿ ಸಿಕ್ಕು ಡಿಕೆಶಿ ಒದ್ದಾಡುತ್ತಿರುವಾಗಲೇ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗು ಸಂಕಷ್ಟ ಎದುರಾಗಿದೆ. ಹಾಗಾದ್ರೆ ಈ ಪ್ರಕರಣಕ್ಕು ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್ ಗು ಏನು ಸಂಬಂಧ..? ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಎಷ್ಟು..? ಲಕ್ಷ್ಮಿ ಹೆಬ್ಬಾಳ್ಕರ್ ಬೆಳೆದು ಬಂದ ಹಾದಿ ಯಾವುದು..? ಎಲ್ಲವನ್ನ ಡಿಟೇಲಾಗಿ ಹೇಳ್ತೀವಿ ನೋಡಿ..

ಯಾರು ಈ ಲಕ್ಷ್ಮಿ ಹೆಬ್ಬಾಳ್ಕರ್..?
ಫ್ರೆಂಡ್ಸ್ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಭಾಗದಲ್ಲಿ ಪ್ರಭಾವಿ ಲಿಂಗಾಯತ ನಾಯಕಿಯಾಗಿ ಬೆಳೆಯುತ್ತಿರುವ ಲೇಡಿ. ಲಕ್ಷ್ಮಿ ಹೆಬ್ಬಾಳ್ಕರ್ ಗಂಡನ ಹೆಸರು ರವೀಂದ್ರ ಹೆಬ್ಬಾಳ್ಕರ್. ಇವರಿಗೆ ಮೃನಾಲ್ ಹೆಬ್ಬಾಳ್ಕರ್ ಎಂಬ ಮಗನಿದ್ದಾನೆ. ಇಂಥ ಲಕ್ಷ್ಮಿ ಹೆಬ್ಬಾಳ್ಕರ್ 2013ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ರು. 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಚೊಚ್ಚಲ ಪ್ರಯತ್ನದಲ್ಲೇ ಸೋತುಹೋದರು. ಬಳಿಕ 2014ರಲ್ಲಿ ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅಲ್ಲೂ ಮಕಾಡೆ ಮಲಗಿದ್ರು. ಹೀಗೆ ಸತತ ಎರಡು ಚುನಾವಣೆಯಲ್ಲಿ ಸೋತ ಲಕ್ಷ್ಮಿ ಹೆಬ್ಬಾಳ್ಕರ್ ರನ್ನ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಯ್ತು. ನಂತ್ರ 2018ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದಲೇ ಮತ್ತೊಮ್ಮೆ ವಿಧಾನಸಭೆಗೆ ಸ್ಪರ್ಧಿಸಿದ್ರು. ಈ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುಕ್ಕರ್ ಭಾರಿ ಸದ್ದು ಮಾಡ್ತು. ಮತದಾರರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕುಕ್ಕರ್ ಹಂಚುತ್ತಿದ್ದಾರೆ ಅಂತ ಬಿಜೆಪಿ ನಾಯಕರು ಅವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ರು. ಈ ಎಲ್ಲಾ ಆರೋಪಗಳ ನಡುವೆ ಲಕ್ಷ್ಮಿ ಹೆಬ್ಬಾಳ್ಕರ್ ಜಯಭೇರಿ ಬಾರಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ರು.

ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಎಷ್ಟು ಗೊತ್ತಾ..?
ಇಡಿ ಇಕ್ಕಳದಲ್ಲಿ ಸಿಕ್ಕಿರೋ ಡಿಕೆಶಿ ಆಸ್ತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಇತರೆ ರಾಜಕಾರಣಿಗಳ ಆಸ್ತಿ ಬಗ್ಗೆಯೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಎಷ್ಟು..? ಹೆಸರಲ್ಲೇ ಲಕ್ಷ್ಮಿ ಅಂತ ಇಟ್ಟುಕೊಂಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಎಷ್ಟು ಕೋಟಿಗೆ ಒಡತಿ ಅನ್ನೋದನ್ನ ತೋರಿಸ್ತೀವಿ ನೋಡಿ.

26 ಕೋಟಿ ಆಸ್ತಿಯ ಒಡತಿ ಲಕ್ಷ್ಮಿ ಹೆಬ್ಬಾಳ್ಕರ್!
ಲಕ್ಷ್ಮಿ ಹೆಬ್ಬಾಳ್ಕರ್ ಬರೋಬ್ಬರಿ 26 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ. ಅಂದಹಾಗೆ ಇದು ನಾವು ಹೇಳುತ್ತಿರುವುದಲ್ಲ. 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಿಸಿಕೊಂಡ ಆಸ್ತಿಯ ಮೌಲ್ಯ ಇದು. ಈ ಆಸ್ತಿಯಲ್ಲಿ ಪತಿ ಹಾಗೂ ಮಗನ ಆಸ್ತಿ ಸೇರಿಕೊಂಡಿಲ್ಲ. ಅದು ಸಪರೇಟ್. ಇನ್ನೊಂದು ವಿಚಾರ ಅಂದ್ರೆ 2014ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಳಿ ಕೇವಲ ಆರುವರೆ ಕೋಟಿಯಷ್ಟು ಆಸ್ತಿ ಇತ್ತು. ಅದು ಈಗ ನಾಲ್ಕು ಪಟ್ಟು ಹೆಚ್ಚಾಗಿದೆ.

ಲಕ್ಷ್ಮಿಗೂ ಡಿಕೆಶಿ ಕೇಸ್‍ಗೂ ಏನು ಸಂಬಂಧ.?
ಈ ಹಿಂದೆ ಪಿ ಎಲ್ ಡಿ ಬ್ಯಾಂಕ್ ಚುನಾವಣೆ ಟೈಮಲ್ಲಿ ಜಾರಕಿಹೊಳಿ ಸಹೋದರರನ್ನೆ ಎದುರುಹಾಕಿಕೊಂಡು ಸುದ್ದಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಡಿಕೆ ಶಿವಕುಮಾರ್ ಮನೆ ಮೇಲೆ 2017ರಲ್ಲಿ ನಡೆದ ಐಟಿ ದಾಳಿ. ಹೌದು ಫ್ರೆಂಡ್ಸ್ ಅಂದು ಐಟಿ ದಾಳಿ ನಡೆದಿದ್ದಾಗ ಕೊನೆ ಬಾರಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಡಿಕೆ ಶಿವಕುಮಾರ್ ಕಾಲ್ ಮಾಡಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಈಗ ಡಿಕೆಶಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

ಫ್ರೆಂಡ್ಸ್ ಇದಿಷ್ಟು ಲಕ್ಷ್ಮಿ ಹೆಬ್ಬಾಳ್ಕರ್ ಆಸ್ತಿ ಹಾಗೂ ಡಿಕೆಶಿ ಪ್ರಕರಣದಿಂದ ಅವರಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ತಿಳಿಸಿಕೊಡುವ ಪ್ರಯತ್ನ.

Contact Us for Advertisement

Leave a Reply