ಈಕ್ವೆಡಾರ್​​​​ನಲ್ಲಿ ಪ್ರವಾಹ: 24 ಸಾವು, ಹಲವರು ನಾಪತ್ತೆ

masthmagaa.com:

ಈಕ್ವೇಡಾರ್‌ನ ರಾಜಧಾನಿ ಕ್ವಿಟೋದಲ್ಲಿ ಪ್ರವಾಹದಿಂದಾಗಿ 24 ಜನ ಸಾವನ್ನಪ್ಪಿದ್ದು, ಡಜನ್‌ಗೂ ಅಧಿಕ ಜನ ಕಾಣೆಯಾಗಿದ್ದಾರೆ. 17 ಗಂಟೆಗಳ ಕಾಲ ಸುರಿದ ಸತತ ಮಳೆಯಿಂದ ಉಂಟಾದ ಪ್ರವಾಹದಲ್ಲಿ ರಸ್ತೆ, ಆಸ್ಪತ್ರೆ, ಶಾಲೆ, ಪೋಲಿಸ್‌ ಠಾಣೆ ಎಲ್ಲಾ ಹಾನಿಗೊಳಗಾಗಿವೆ. ನಗರದ ಸಮೀಪವಿದ್ದ 4,000 ಕ್ಯೂಬಿಕ್‌ ಮೀಟರ್‌ ಸಾಮರ್ಥ್ಯದ ದೊಡ್ಡ ಕೆರೆಯಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ನಾಲ್ಕುಪಟ್ಟು ಜಾಸ್ತಿ ನೀರು ತುಂಬಿ ದಿಢೀರನೇ ಒಡೆದಿದೆ. ಇದರಿಂದ ಒಂದು ಕಿಲೋಮೀಟರ್​​​ ಪ್ರದೇಶದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಆಟದ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿದ್ದ ಆಟಗಾರರು ಮತ್ತು ಪ್ರೇಕ್ಷಕರೆಲ್ಲಾ ಇದ್ರಲ್ಲಿ ಕೊಚ್ಚಿ ಹೋಗಿದ್ದಾರೆ. ಕಳೆದ 2 ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈಕ್ವೆಡಾರ್​ನಲ್ಲಿ ಈ ಪ್ರಮಾಣದ ಮಳೆಯಾಗಿದೆ.

-masthmagaa.com

Contact Us for Advertisement

Leave a Reply