masthmagaa.com:

ವರ್ಷದ ಕೊನೇ ದಿನವಾದ ಇವತ್ತು ಪ್ರಧಾನಿ ಮೋದಿ ಗುಜರಾತ್​ನ ರಾಜ್​ಕೋಟ್​ನಲ್ಲಿ ಏಮ್ಸ್​ ಆಸ್ಪತ್ರೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದ್ರು. ಬಳಿಕ ಮಾತನಾಡಿದ ಅವರು, ಈ ವರ್ಷದ ಕೊನೇ ದಿನವಾದ ಇವತ್ತು ದೇಶದ ಲಕ್ಷಾಂತರ ವೈದ್ಯರು, ಹೆಲ್ತ್​ ವಾರಿಯರ್ಸ್​, ಸ್ವಚ್ಛತಾಕರ್ಮಿಗಳು, ಮೆಡಿಕಲ್​ಗಳಲ್ಲಿ ಕೆಲಸ ಮಾಡೋರು ಹಾಗೂ ಇತರೆ ಫ್ರಂಟ್​ಲೈನ್ ಕೊರೋನಾ ವಾರಿಯರ್​ಗಳನ್ನ ನೆನೆಯುವ ದಿನವಾಗಿದೆ. ಕೊರೋನಾ ವಿರುದ್ಧದ ಹೋರಾಟದ ವೇಳೆ ಪ್ರಾಣ ಕಳೆದುಕೊಂಡವರಿಗೆ ನಾನು ನಮಿಸುತ್ತೇನೆ. ಆರೋಗ್ಯವೇ ಸಂಪತ್ತು ಅನ್ನೋದನ್ನ 2020 ಚೆನ್ನಾಗಿ ಅರ್ಥ ಮಾಡಿಸಿದೆ. ಈ ವರ್ಷ ಬರೀ ಚಾಲೆಂಜ್​ಗಳಿಂದ ತುಂಬಿ ಹೋಗಿತ್ತು. ಈಗ ದೇಶದಲ್ಲಿ ಕೊರೋನಾ ಕೇಸಸ್ ಕಮ್ಮಿಯಾಗ್ತಿದೆ. ನಾವು ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನೇಷನ್​ ಪ್ರೋಗ್ರಾಂಗೆ ರೆಡಿಯಾಗ್ತಿದ್ದೇವೆ. ‘ಕೊರೋನಾಗೆ ಲಸಿಕೆ ಸಿಗೋವರೆಗೆ ನಿರ್ಲಕ್ಷ್ಯ ಬೇಡ’ (Dawai nahi toh dheelai nahi) ಅಂತ ಈ ಹಿಂದೆ ಹೇಳಿದ್ದೆ. ಆದ್ರೀಗ ಹೇಳ್ತಿದ್ದೀನಿ, ‘ಲಸಿಕೆ ಜೊತೆಗೆ ಎಚ್ಚರಿಕೆ ಕೂಡ ಇರಲಿ’ (Dawai bhi aur kadaai bhi). ‘ದವಾಯಿ ಬೀ ಔರ್ ಕಡಾಯಿ ಭೀ’ ಅನ್ನೋದೇ 2021ಕ್ಕೆ ನಮ್ಮ ಮಂತ್ರ. ನಮ್ಮ ದೇಶದಲ್ಲಿ ರೂಮರ್​ಗಳು ತುಂಬಾ ಬೇಗ ಹರಡುತ್ತೆ. ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಬೇಜವಾಬ್ದಾರಿಯಿಂದ ರೂಮರ್​ಗಳನ್ನ ಹರಡುತ್ತಾರೆ. ಕೊರೋನಾ ಲಸಿಕೆಯ ಅಭಿಯಾನ ಶುರುವಾದಗಲೂ ವದಂತಿಗಳು ಹರಡಬಹುದು. ಕೆಲವೊಂದು ಆಲ್ರೆಡಿ ಹರಡಿಯಾಗಿದೆ. ಇಂತಹ ರೂಮರ್​ಗಳ ಬಗ್ಗೆ ಎಚ್ಚರದಿಂದ ಇರಿ. ಜವಾಬ್ದಾರಿಯುತ ನಾಗರಿಕರಾಗಿರುವ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವುದಾದ್ರೂ ಮೆಸೇಜ್ ಫಾರ್ವಾರ್ಡ್​ ಮಾಡುವಾಗ ಅದನ್ನ ಚೆಕ್ ಮಾಡಿಕೊಳ್ಳಿ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply