90ರ ಹರಯದಲ್ಲಿ ಇನ್‍ಸ್ಟಾಗ್ರಾಂ ಖಾತೆ ತೆರೆದ ಲತಾ..!

ಗಾನಕೋಗಿಲೆ ಲತಾ ಮಂಗೇಷ್ಕರ್ 90 ವರ್ಷ ವಯಸ್ಸಾಗಿದ್ದರೂ ಫುಲ್ ಆಕ್ಟೀವ್ ಆಗಿರ್ತಾರೆ. ಅವರು ಮಾಡೋ ಟ್ವೀಟ್ ಬಗ್ಗೆ ಕೆಲ ನಿಮಿಷಗಳಲ್ಲಿ ಚರ್ಚೆ ಶುರುವಾಗುತ್ತೆ. ಈಗ ಇನ್‍ಸ್ಟಾಗ್ರಾಂ ಗೂ ಲತಾ ಎಂಟ್ರಿ ಕೊಟ್ಟಿದ್ದಾರೆ. ಸೆಪ್ಟೆಂಬರ್ 28ರಂದು 90ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಲತಾ ಮಂಗೇಷ್ಕರ್, ಇನ್‍ಸ್ಟಗ್ರಾಂನಲ್ಲಿ ಸೋಷಿಯಲ್ ಅಕೌಂಟ್ ಮಾಡಿದ್ದಾರೆ. ಅಲ್ಲದೆ ಒಂದು ಬುಕ್ ಹಿಡಿದಿರುವ ಫೋಟೋ ಕೂಡ ಹಾಕಿದ್ದಾರೆ. ಜೊತೆಗೆ ನಮಸ್ಕಾರ, ಇದೇ ಮೊದಲ ಬಾರಿಗೆ ನಿಮ್ಮೊಂದಿಗೆ ಇನ್‍ಸ್ಟಾಗ್ರಾಂನಲ್ಲಿ ಸೇರಿದ್ದೇನೆ ಎಂದು ಬರೆದಿದ್ದಾರೆ. ಇದಾದ 2 ಗಂಟೆಯಲ್ಲಿ 47 ಸಾವಿರ ಅಭಿಮಾನಿಗಳು ಅವರನ್ನು ಫಾಲೋ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಲತಾ ಅವರನ್ನು ಸ್ವಾಗತಿಸಿದ್ದಾರೆ.

https://www.instagram.com/p/B3B25CJHbVB/?utm_source=ig_web_copy_link

Contact Us for Advertisement

Leave a Reply