ಪಾಕಿಸ್ತಾನಕ್ಕೆ ಹೊಸ ಫಾರಿನ್ ಮಿನಿಸ್ಟರ್‌! ಯಾರು ಗೊತ್ತಾ? ಇವರ ಹಿನ್ನೆಲೆ ಕೇಳಿದ್ರೆ!

masthmagaa.com:

ಪಾಕಿಸ್ತಾನದ ಸ್ನೇಹಿತರು ನಮ್ಮಿಂದ ದೂರ ಹೋಗೋಕೆ ಹಳೇ ಸರ್ಕಾರದ ವಿದೇಶಾಂಗ ನೀತಿಯ ವಿಫಲತೆಯೇ ಕಾರಣ ಅಂತ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಅವ್ರು ಪಾಕಿಸ್ತಾನ, ಅಮೆರಿಕಾ ಸೇರಿದಂತೆ ಯಾವುದೇ ದೇಶದ ಜೊತೆಗೂ ಹಗೆತನ ಸಾಧಿಸೋಕೆ ನಾವು ಇಷ್ಟ ಪಡಲ್ಲ. ಹಿಂದಿನ ಸರ್ಕಾರಗಳ ಕೆಲವು ತಪ್ಪುಗಳಿಂದ ನಮ್ಮ ಕೆಲ ಸ್ನೇಹಿತರು ದೂರವಾಗಿದ್ದಾರೆ. ವಿಶೇಷವಾಗಿ ಅಮೆರಿಕ, ಸೌದಿ ಅರೇಬಿಯಾ, ಕತಾರ್‌, ಹಾಗೂ ಚೀನಾ ನಮ್ಮಿಂದ ದೂರ ಹೋಗಿವೆ. ಮುಖ್ಯವಾಗಿ ಪಾಕಿಸ್ತಾನ-ಅಮೆರಿಕಾ ನಡುವಿನ ಅಪನಂಬಿಕೆಯನ್ನ ಇಲ್ಲವಾಗಿಸೋದು ಈಗ ತುಂಬಾ ಅಗತ್ಯ. ಉಳಿದ ರಾಷ್ಟ್ರಗಳ ಜೊತೆಗೆ ಹಿಂದೆ ಆಗಿರೋ ತಪ್ಪುಗಳನ್ನ ಸರಿಪಡಿಸಿಕೊಂಡು ಅವರ ಜೊತೆಗೆ ಉತ್ತಮ ಸ್ನೇಹ ಹೊಂದೋ ಬಗ್ಗೆ ನಾವು ಪ್ರಯತ್ನ ಮಾಡ್ತೇವೆ ಅಂತ ಹೇಳಿದ್ದಾರೆ. ಇದರ ನಡುವೆಯೇ ಪಾಕಿಸ್ತಾನಕ್ಕೆ ಹೊಸ ವಿದೇಶಾಂಗ ಸಚಿವರ ನೇಮಕವಾಗಿದೆ. PPP ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಚೇರ್ಮನ್ ಭಿಲಾವಾಲ್‌ ಭುಟ್ಟೋ ಜರ್ದಾರಿ ಕೈಗೆ ಪಾಕ್‌ನ ವಿದೇಶಾಂಗ ನೀತಿ ಹೊಣೆ ಹೊರಿಸಲಾಗಿದೆ. ಅಂದ್ಹಾಗೆ ಈ ಭಿಲಾವಲ್‌ ಭುಟ್ಟೋ ರಾಜಕೀಯಕ್ಕೆ ಹೊಸ ಮುಖವೇನೂ ಅಲ್ಲ. ಅವರ ಹಿಂದಿನ ಎರಡೂ ತಲೆಮಾರುಗಳು ಅಂದ್ರೆ ಅವರ ತಾಯಿ ಬೆನ್ಜಿರ್‌ ಭುಟ್ಟೋ ಹಾಗು ಅವರ ತಾತ ಜುಲ್ಫಿಕರ್‌ ಆಲಿ ಭುಟ್ಟೋ ಇಬ್ರೂ ಕೂಡ ಪಾಕಿಸ್ತಾನದಲ್ಲಿ ಪ್ರಧಾನಿಯಾಗಿ ಆಳ್ವಿಕೆ ಮಾಡಿದೋರು. ಇಂಥ ಭುಟ್ಟೋ ಕುಡಿ ಈಗ ಪಾಕ್‌ ಆಡಳಿತಕ್ಕೆ ಮತ್ತೆ ಮರಳಿದ್ದು ರಾಷ್ಟ್ರಪತಿ ಆರಿಫ್‌ ಅಲ್ವಿ ನಿನ್ನೆ ಪ್ರಮಾಣವಚನ ಬೋಧಿಸಿದ್ದಾರೆ. ಇಷ್ಟು ದಿನದಿಂದ ಇವರನ್ನ ಆರ್ಥಿಕ ಸಚಿವರಾಗಿ ನೇಮಕ ಮಾಡಲಾಗುತ್ತೆ ಅಂತ ಹೇಳಲಾಗ್ತಿತ್ತು. ಆದ್ರೆ ಈಗ ವಿದೇಶಾಂಗ ಇಲಾಖೆಯನ್ನ ನೀಡಲಾಗಿದೆ. ಇನ್ನು ಮತ್ತೊಂದು ಇಂಟ್ರಸ್ಟಿಂಗ್‌ ಸಂಗತಿ ಅಂದ್ರೆ ಇದೇ ವಿದೇಶಾಂಗ ಇಲಾಖೆಯ ರಾಜ್ಯ ಸಚಿವೆಯಾಗಿ ಹೀನಾ ರಬ್ಬಾನಿ ಕಳೆದ ವಾರವೇ ನೇಮಕವಾಗಿದ್ದಾರೆ. ಭುಲಾವಲ್‌ ಭುಟ್ಟೋಗೂ ಈ ಹೀನಾ ರಬ್ಬಾನಿಗೂ ತುಂಬಾ ಹತ್ತಿರದ ಸಂಬಂಧ ಇದೆ, ಭಿಲಾವಲ್ ರಬ್ಬಾನಿ ನಡುವೆ ಸಾಕಷ್ಟು ಸಮ್ತಿಂಗ್‌ ಇದೆ. ಭಿಲಾವಲ್‌ಗೆ ಇವ್ರು ತುಂಬಾ ಬೇಕಾದವ್ರು ಅನ್ನೋ ಪಿಸುಪಿಸು ಗುಸುಗುಸುಗಳ ಮದ್ಯೆದಲ್ಲೇ ಇಬ್ಬರೂ ಒಂದೇ ಇಲಾಖೆಯಲ್ಲಿರೋದು ಈಗ ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply