ಕರಗಿದ ʼಖಾನ್‌ʼದಾನ್! ಪವರ್ ತೋರಿಸಿದ ಪಾಕಿಸ್ತಾನ ಸೇನೆ!

masthmagaa.com:

ಪಾಕಿಸ್ತಾನದಲ್ಲಿ ನಡೆಯಲಿರುವ ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಹಿನ್ನಡೆಯಾಗಿದೆ. ಇಮ್ರಾನ್‌ರ PTI ಪಕ್ಷದಿಂದ ಹೊರ ಹೋಗಿದ್ದ ಅತೃಪ್ತ ನಾಯಕರು ಸೇರಿಕೊಂಡು ಹೊಸ ರಾಜಕೀಯ ಪಕ್ಷವನ್ನ ಪ್ರಾರಂಭಿಸಿದ್ದಾರೆ. ಈ ನೂತನ ಪಕ್ಷಕ್ಕೆ ಅಲ್ಲಿನ ಸೇನೆ ಬೆಂಬಲ ನೀಡಿದೆ ಅಂತ ಹೇಳಲಾಗ್ತಿದೆ. ಶುಗರ್‌ ಉದ್ಯಮಿ ಹಾಗೂ ಇಮ್ರಾನ್‌ರ ಹಳೆ ಫ್ರೆಂಡ್‌ ಜಹಂಗೀರ್‌ ಖಾನ್‌ ತರೀನ್‌ ಅವ್ರು ಈ ಗುಂಪಿನ ನೇತೃತ್ವ ವಹಿಸಿದ್ದು, Istehkam-e-Pakistan Party (IPP)ಅನ್ನೊ ಪಕ್ಷವನ್ನ ಲಾಂಚ್‌ ಮಾಡಿದ್ದಾರೆ. ನಾವು ಹೊಸ ರಾಜಕೀಯ ಪಕ್ಷ IPPಗೆ ಅಡಿಪಾಯ ಹಾಕುತ್ತಿದ್ದೇವೆ ಅಂತ ತರೀನ್‌ ಹೇಳಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು PTI ನಾಯಕರು ಹಾಗೂ ಶಾಸಕರು ತಮ್ಮ ಹೊಸ ಬಾಸ್‌ ತರೀನ್‌ ಅವ್ರಿಗೆ ಬೆಂಬಲ ನೀಡಿದ್ದಾರೆ. ಇದ್ರಿಂದಾಗಿ ಇಮ್ರಾನ್‌ ಖಾನ್‌ಗೆ ಭಾರಿ ಹೊಡೆತ ಬಿದ್ದಂಗಾಗಿದೆ. ಈಗಾಗಲೇ ಹಲವು ಕೇಸ್‌ಗಳನ್ನ ಫೇಸ್‌ ಮಾಡ್ತಿರೋ ಇಮ್ರಾನ್‌ ಖಾನ್‌ಗೆ ಅವರ ಪಕ್ಷ ಒಡೆದು ಹೋಗಿರೋದು ಚುನಾವಣೆಯ ಮೇಲೆ ಭಾರಿ ಎಫೆಕ್ಟ್‌ ಆಗಲಿದೆ ಅಂತ ಹೇಳಲಾಗ್ತಿದೆ. ಅದ್ರಲ್ಲೂ ತಮ್ಮ ಸ್ನೇಹಿತ ಹಾಗೂ 2018ರಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತರೀನ್‌, ಇಮ್ರಾನ್‌ರನ್ನ ತೊರೆದು ಹೊಸ ಪಕ್ಷ ಸ್ಥಾಪನೆ ಮಾಡಿರೋದು ಅತಿದೊಡ್ಡ ಹಿನ್ನಡೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply