masthmagaa.com:

ಸೌದಿ ಅರೇಬಿಯಾದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯನ್ನ 6 ವರ್ಷ ಕಾಲ ಜೈಲು ಶಿಕ್ಷೆ ವಿಧಿಸಿ ಜೈಲಿಗೆ ಅಟ್ಟಲಾಗಿದೆ. ಈಕೆಯ ಹೆಸರು ಲೋಜೈನ್ ಅಲ್ ಹಾಥ್ಲೌಲ್. ಈಕೆಯ ವಿರುದ್ಧ ರಾಜಪ್ರಭುತ್ವ ಇರೋ ಸೌದಿಯಲ್ಲಿ ವ್ಯವಸ್ಥೆ ಬದಲಾವಣೆಗೆ ಪ್ರೇರೇಪಿಸಿದ, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ ಹಾಗೂ ಇಂಟರ್​​ನೆಟ್ ಬಳಸಿ ಸಮಾಜದಲ್ಲಿ ವ್ಯವಸ್ಥೆ ಹಾಳು ಮಾಡಿದ ಆರೋಪ ಹೊರಿಸಲಾಗಿದೆ. ಜೊತೆಗೆ ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗಿದೆ. ಈಕೆಯನ್ನ 2018ರಿಂದಲೇ ವಿಚಾರಣಾ ಪೂರ್ವ ಖೈದಿಯಾಗಿ ಜೈಲಿನಲ್ಲಿ ಇಡಲಾಗಿದೆ. ಈಕೆ ತನ್ನ ಶಿಕ್ಷೆ ಮುಗಿಸ ಹೊರಬಂದ ಬಳಿಕಯೂ ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply