ಬೈರುತ್‌ ಬಂದರಿನಲ್ಲಿ ಸಿಕ್ತು 90 ಲಕ್ಷ ನಿಷೇಧಿತ ಮಾತ್ರೆ!

masthmagaa.com:

ಲೆಬನಾನಿನ ಭದ್ರತಾ ಏಜನ್ಸಿಗಳು ಒಂಭತ್ತು ಮಿಲಿಯನ್‌ ಅಂದ್ರೆ 90 ಲಕ್ಷದಷ್ಟು ನಿಷೇಧಿತ ಆಂಫೆಟಮೈನ್‌ ಕ್ಯಾಪ್ಟಗಾನ್ ಅನ್ನುವ ಮಾತ್ರೆಗಳನ್ನ, ಗಲ್ಫ್‌ ದೇಶವೊಂದಕ್ಕೆ ಕಳ್ಳ ಸಾಗಣೆ ಮಾಡುವ ಪ್ರಯತ್ನವನ್ನ ವಿಫಲಗೊಳಿಸಿದ್ದಾರೆ. ಲೆಬನಾನಿನ ಬೈರುತ್‌ ಬಂದರಿನಲ್ಲಿ ಈ ಮಾತ್ರೆ ಪ್ಲಾಸ್ಟಿಕ್‌ ಕಿತ್ತಳೆ ಹಣ್ಣಿನಲ್ಲಿ ಸಿಕ್ಕಿದೆ. ನಂತ್ರ ಈ ಸಂಬಂಧ ಹಲವಾರು ಜನರನ್ನ ಆರೆಸ್ಟ್‌ ಮಾಡಿದ್ದು, ಇದರ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುತ್ತೆ ಅಂತ ಲೆಬನಾನಿನ ಕಸ್ಟಮ್ಸ್‌ ಹೇಳಿದೆ. ಈ ಮಾತ್ರೆಯನ್ನ ಕೆಲವು ಉಗ್ರ ಸಂಘಟನೆಗಳು ತಮ್ಮ ಸಂಘಟನೆಯ ಸದಸ್ಯರಿಗೆ ಕೃತಕವಾಗಿ ಶಕ್ತಿ ಹೆಚ್ಚಿಸುವ ಸಲುವಾಗಿ ಈ ಮಾತ್ರೆಯನ್ನ ಕೊಡ್ತಾ ಇದ್ರು. ಹಾಗಾಗಿ ಈ ಮಾತ್ರೆಯನ್ನ ವಿಶ್ವದ ಹಲವಾರು ದೇಶಗಳಲ್ಲಿ ನಿಷೇಧಿಸಲಾಗಿದೆ.

-masthmagaa.com

Contact Us for Advertisement

Leave a Reply