ಅಫ್ಘಾನಿಸ್ತಾನದಿಂದ ಜನ ಅಕ್ಕಪಕ್ಕದ ದೇಶಗಳಿಗೆ ಓಡಿಹೋಗ್ತಿರೋದ್ಯಾಕೆ?

masthmagaa.com:

ಅಮೆರಿಕ ಮತ್ತು ನ್ಯಾಟೋ ಸೇನೆಗಳು ಬರೋಬ್ಬರಿ 20 ವರ್ಷಗಳ ಬಳಿಕ ಅಫ್ಘನಿಸ್ತಾನದಿಂದ ಗಂಟುಮೂಟೆ ಕಟ್ಕೊಂಡು ಹೊರಬರ್ತಿವೆ. ಇದರ ಬೆನ್ನಲ್ಲೇ ತಾಲಿಬಾನಿಗಳು ಅಫ್ಘನಿಸ್ತಾನದ ಬಹುತೇಕ ಭಾಗವನ್ನ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಹಿಂಸಾಚಾರ ಹೆಚ್ಚಾಗಿದ್ದು ಅಫ್ಘನ್​ ಸೈನಿಕರು ಮತ್ತು ನಿರಾಶ್ರಿತರು ತಜಕಿಸ್ತಾನ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಓಡಿ ಹೋಗ್ತಿದ್ದಾರೆ. ಅಫ್ಘನಿಸ್ತಾನ ಜಿತೆ ಭಾರತ ಕೂಡ ಸಣ್ಣದಾಗಿ ಗಡಿ ಹಂಚಿಕೊಳ್ಳುತ್ತೆ. ಹೀಗಾಗಿ ಅಫ್ಘನಿಸ್ತಾನದಲ್ಲಿನ ಪರಿಸ್ಥಿತಿ ಭಾರತದ ಭದ್ರತೆ ಮೇಲೆ ಪರಿಣಾಮ ಬೀರುತ್ತೆ ಅಂತ ರಷ್ಯಾ ಪ್ರವಾಸದಲ್ಲಿರೋ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಜೊತೆಗೆ ಅಫ್ಘನಿಸ್ತಾನ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಶಾಂತಿ ನೆಲಸಬೇಕು ಅಂದ್ರೆ ಭಾರತ ಮತ್ತು ರಷ್ಯಾ ಒಟ್ಟಾಗಿ ಕೆಲಸ ಮಾಡಬೇಕು. ಒಂದು ಸ್ವತಂತ್ರ, ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ಅಫ್ಘನಿಸ್ತಾನದ ಪರವಾಗಿ ನಾವಿದ್ದೇವೆ ಅಂತ ಜೈಶಂಕರ್ ಹೇಳಿದ್ಧಾರೆ. ಜೊತೆಗೆ ಕೊರೋನಾದ ಎರಡನೇ ಅಲೆ ವೇಳೆ ರಷ್ಯಾ ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ಧಾರೆ. ಇನ್ನು ಅಫ್ಘನಿಸ್ತಾನದಲ್ಲಿರೋ ತನ್ನ ರಾಯಭಾರ ಕಚೇರಿಯನ್ನ ಭಾರತ ಬಂದ್ ಮಾಡುತ್ತೆ ಅಂತ ಹೇಳಲಾಗಿತ್ತು. ಆದ್ರೆ ಸದ್ಯಕ್ಕೆ ಯಾವ್ದೇ ಬೆದರಿಕೆ ಇಲ್ಲ. ರಾಯಭಾರ ಕಚೇರಿ ಬಂದ್​ ಮಾಡೋ ಬಗ್ಗೆ ಭಾರತದ ಜೊತೆ ಮಾತುಕತೆಯೂ ನಡೆದಿಲ್ಲ ಅಂತ ಭಾರತಕ್ಕೆ ಅಫ್ಘನ್​ ರಾಯಭಾರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply