ಅಫ್ಘಾನ್‌ ಭೂಕಂಪ: ಎಲ್ಲ ರೀತಿಯ ನೆರವು ನೀಡೋದಾಗಿ ಭಾರತ ಅಭಯ!

masthmagaa.com:

ತಾಲಿಬಾನಿಗಳ ಅಪ್ಘಾನಿನಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದು ಕೆಲವು ರಾಷ್ಟ್ರಗಳು ಸಹಾಯಕ್ಕೂ ಮುಂದಾಗಿವೆ. ಇದರ ನಡುವೆಯೇ ಅಪ್ಘಾನಿಸ್ತಾನ್ ಭೂಕಂಪದಲ್ಲಿ ಸಿಲುಕಿದ್ದ ಸುಮಾರು 90% ಜನರನ್ನ ರಕ್ಷಣೆ ಮಾಡಲಾಗಿದೆ ಅಂತ ವಿಶ್ವಸಂಸ್ಥೆ ತಿಳಿಸಿದೆ. ಇತ್ತ ಭಾರತ ಕೂಡ ಅಫ್ಘಾನಿಸ್ತಾನಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಹಾಯವನ್ನ ಮಾಡೋದಾಗಿ ಹೇಳಿದೆ. ಅಂದಹಾಗೆ ಮೊನ್ನೆ ನಡೆದ ಈ ಭೂಕಂಪನದಿಂದ ಕನಿಷ್ಠ 1 ಸಾವಿರ ಜನರು ಮೃತಪಟ್ಟಿದ್ದು, 1,500 ಜನರು ಗಾಯಗೊಂಡಿದ್ರು, ಈಗ 3 ಸಾವಿರ ಜನರು ಮನೆ- ಮಠವನ್ನ ಕಳೆದು ಕೊಂಡಿದ್ದಾರೆ. ಇದು ಅಫ್ಘಾನಿಸ್ತಾನ ಇತಿಹಾಸದಲ್ಲಿ ಕಳೆದ 20 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಭೂಕಂಪ ಅಂತ ಅಮೆರಿಕ ಸರ್ಕಾರದ ಅಂಕಿ ಅಂಶ ತಿಳಿಸಿದೆ.

-masthmagaa.com

Contact Us for Advertisement

Leave a Reply