ಇಟಲಿಯಲ್ಲಿ ರಾಜರೋಷವಾಗಿ ತಿರುಗಾಡ್ತಿದ್ದ ʻಕಾಡಿನ ರಾಜʼನ ಬಂಧನ!

masthmagaa.com:

ಇಟಲಿಯ ಕಡಲ ತೀರದಲ್ಲಿರೋ ಪಟ್ಟಣವೊಂದ್ರಲ್ಲಿ ಸಿಂಹವೊಂದು ರಾಜರೋಷವಾಗಿ ತಿರುಗಾಡ್ತಾ ಇರೋ ವಿಡಿಯೋ ಇದೀಗ ಹರಿದಾಡ್ತಾ ಇದೆ. ಈ ಘಟನೆ ರೋಮ್‌ನ ಲಾಡಿಸ್ಪೋಲಿಯಲ್ಲಿ ನವೆಂಬರ್‌ 11 ರಂದು ನಡೆದಿತ್ತು. ಇಟಲಿಯ ಲೋಕಲ್‌ ಸರ್ಕಸ್‌ನಿಂದ ತಪ್ಪಿಸಿಕೊಂಡ ಈ ಸಿಂಹ ಇಟಲಿಯ ಕೆಲ ಪ್ರದೇಶಗಳಲ್ಲಿ ಹಲವು ಗಂಟೆಗಳ ಕಾಲ ತಿರುಗಾಡ್ತಾ ಇತ್ತು. ಆದ್ರಿಂದ ಅಲ್ಲಿನ ಕೆಲ ಸಂಘಟನೆಗಳು, ಕಾಡು ಪ್ರಾಣಿಗಳನ್ನ ಮನೋರಂಜನೆಗಾಗಿ ಬಳಸೋದನ್ನ ಬ್ಯಾನ್‌ ಮಾಡಬೇಕು ಅಂತ ಡಿಮಾಂಡ್‌ ಮಾಡಿವೆ. ಈ ಘಟನೆ ತಿಳೀತಾ ಇದ್ದಂತೆ, ಅಲ್ಲಿನ ಮೇಯರ್‌ ಅಲೆಸ್ಸ್ಯಾಂಡ್ರೋ ಗ್ರ್ಯಂಡೋ ತಮ್ಮ ನಾಗರಿಕರಿಗೆ ಮನೆಯಲ್ಲೇ ಇರುವಂತೆ ಸೂಚನೆ ನೀಡಿದ್ದಾರೆ. ನಂತರ ಅಲ್ಲಿನ ಪೊಲೀಸ್‌ ಮತ್ತು ಸರ್ಕಸ್‌ ಸಿಬ್ಬಂದಿ ಸೇರಿ ಸಿಂಹವನ್ನ ಹಿಡಿದು ಬಂಧಿಸಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಇಟಲಿಯ ಮೀಡಿಯಾದಲ್ಲಿ ಹರಿದಾಡ್ತಾ ಇದೆ.

-masthmagaa.com

Contact Us for Advertisement

Leave a Reply