ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಭಾರಿ ನಿರಾಸೆ!

masthmagaa.com:

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇವತ್ತು ನಿರಾಸೆಯಾಗಿದೆ. ಮಹಿಳೆಯರ ಹಾಕಿಯಲ್ಲಿ ಭಾರತ ತಂಡ ಗ್ರೇಟ್​ ಬ್ರಿಟನ್​ ವಿರುದ್ಧ ಸೋತಿದೆ. ಇದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯವಾಗಿತ್ತು. ಇದರಲ್ಲಿ ಗೆದ್ದಿದ್ರೆ ಮಹಿಳೆಯರ ಹಾಕಿ ತಂಡ ಇತಿಹಾಸ ಬರೀತಿತ್ತು. ಆದ್ರೆ ಅದು ಆಗಲಿಲ್ಲ. 3-4 ಗೋಲುಗಳಿಂದ ಭಾರತ ಸೋತಿದೆ. ಮತ್ತೊಂದುಕಡೆ 65 ಕೆಜಿ ತೂಕದ ಪುರುಷರ ಫ್ರೀಸ್ಟೈಲ್​ ರೆಸ್ಲಿಂಗ್​​ನ ಸೆಮಿ ಫೈನಲ್​​ನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಸೋತಿದ್ದಾರೆ. ಇವರನ್ನ ಅಝರ್​ಬೈಜಾನ್​ ದೇಶದ ಕುಸ್ತಿಪಟು 12-5 ಅಂಕಗಳ ಅಂತರದಿಂದ ಸೋಲಿಸಿದ್ದಾರೆ. ಬಜರಂಗ್ ಪೂನಿಯಾ ಈಗ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ. ಇನ್ನುಳಿದಂತೆ ಮಹಿಳೆಯರ ಗಾಲ್ಫ್​​ನಲ್ಲಿ ಭಾರತದ ಅದಿತಿ ಅಶೋಕ್ ಪದಕ ನಿರೀಕ್ಷೆ ಹುಟ್ಟಿಸಿದ್ದಾರೆ. ರೌಂಡ್​ ಥ್ರೀನ ಕೊನೆಯಲ್ಲಿ ಇವರು ಟಾಪ್​ ಎರಡನೇ ಸ್ಥಾನದಲ್ಲಿದ್ರು. ನಾಳೆ ಬೆಳಗ್ಗೆ 3 ಗಂಟೆಗೆ ರೌಂಡ್​ ಫೋರ್ ನಡೆಯಲಿದೆ. ಇನ್ನು ನಾಳೆ ಸಂಜೆ ನಾಲ್ಕು ಗಂಟೆಗೆ ಪುರುಷರ ಜಾವಲಿನ್​​ ಥ್ರೋ ಫೈನಲ್​ ನಡೆಯಲಿದೆ. ಇದರಲ್ಲಿ ಭಾರತದ ನೀರಜ್​ ಚೋಪ್ರಾ ಇದ್ದಾರೆ. ಇನ್ನು ಇವತ್ತು ಪದಕ ಪಟ್ಟಿಯಲ್ಲಿ ಯಾವ ದೇಶ ಎಷ್ಟನೇ ಸ್ಥಾನದಲ್ಲಿದೆ ಅಂತ ನೋಡೋದಾದ್ರೆ. 36 ಚಿನ್ನದ ಪದಕದೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. ಯುಎಸ್​​ 31 ಗೋಲ್ಡ್​ನೊಂದಿಗೆ ಎರಡನೇ, ಜಪಾನ್ 24 ಗೋಲ್ಡ್​ನೊಂದಿಗೆ ಮೂರನೇ ಸ್ಥಾನದಲ್ಲಿ, ಗ್ರೇಟ್​ ಬ್ರಿಟನ್ 18 ಗೋಲ್ಡ್ ಮೆಡಲ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಭಾರತ 2 ಬೆಳ್ಳಿ ಮತ್ತು 3 ಕಂಚಿನ ಪದಕದೊಂದಿಗೆ 66ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply