ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟಿನ್‌ ಮತ್ತೆ ಆಸ್ಪತ್ರೆಗೆ ದಾಖಲು!

masthmagaa.com:

ಪ್ರಾಸ್ಟೇಟ್‌ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌, ಈಗ ಮತ್ತೆ ಆಸ್ಪತ್ರೆ ಸೇರಿದ್ದಾರೆ. ಆಸ್ಟಿನ್‌ ಅವರಿಗೆ ಮತ್ತೆ ಮೂತ್ರಕೋಶದ ಸಮಸ್ಯೆ ಕಾಣಿಸಿಕೊಂಡು, ವಾಷಿಂಗ್ಟನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇವ್ರ ಕರ್ತವ್ಯಗಳನ್ನ ರಕ್ಷಣಾ ಉಪ ಕಾರ್ಯದರ್ಶಿಗೆ ವರ್ಗಾಯಿಸಲಾಗಿದೆ ಅಂತ ಪೆಂಟಗನ್‌ ವಕ್ತಾರ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೇ ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯೋಕೆ ಲಾಯ್ಡ್‌ ಆಸ್ಟಿನ್‌ ಯಾರಿಗೂ ತಿಳಿಸದೇ ಗುಪ್ತವಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಈ ಬಗ್ಗೆ ಅಧ್ಯಕ್ಷ ಜೋ ಬೈಡನ್‌ರಿಗೂ ಮಾಹಿತಿ ನೀಡಿರಲಿಲ್ಲ. ಆದ್ರಿಂದ ಅಮೆರಿಕದ ಸೆನೆಟ್‌ನಲ್ಲಿ ಆಸ್ಟಿನ್‌ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ವು.

-masthmagaa.com

Contact Us for Advertisement

Leave a Reply