ನಾಳೆಯಿಂದ ಲಾಕ್​ಡೌನ್ ಸಡಿಲಿಕೆ.. ಜಾಗ್ರತೆ ತುಂಬಾ ಮುಖ್ಯ!

masthmagaa.com:

ನಾಳೆಯಿಂದ ಅರ್ಧರಾಜ್ಯ ಓಪನ್ ಆಗ್ತಾ ಇದೆ. ಕೊರೋನಾ ಪಾಸಿಟಿವಿಟಿ ದರ 5 ಪರ್ಸೆಂಟ್​​ಗಿಂತ ಕಡಿಮೆ ಇರೋ 16 ಜಿಲ್ಲೆಗಳಲ್ಲಿ ಲಾಕ್​​​​ಡೌನ್​ನಿಂದ ರಿಲೀಫ್ ನೀಡಲಾಗಿದೆ. ಎಲ್ಲಾ ಅಂಗಡಿಗಳು ಸಂಜೆ 5 ಗಂಟೆವರೆಗೆ ಓಪನ್ ಇರುತ್ತೆ. ಜನ ಕೂಡ ಸಂಜೆ 7 ಗಂಟೆವರೆಗೆ ಓಡಾಡೋಕೆ ಅವಕಾಶ ನೀಡಲಾಗಿದೆ. ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಊಟ ಮಾಡ್ಬೋದು.. ಜಿಮ್ ಇರುತ್ತೆ. ಮೆಟ್ರೋ-ಬಸ್ ಓಡಾಟ ಇರುತ್ತೆ. ಆದ್ರೆ ಇವೆಲ್ಲವೂ 50 ಪರ್ಸೆಂಟ್ ಜನರೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬಹುದಾಗಿದೆ. ಇನ್ನು ಪಾಸಿಟಿವಿಟಿ ದರ 5ರಿಂದ 10 ಪರ್ಸೆಂಟ್ ಇರುವ 13 ಜಿಲ್ಲೆಗಳಲ್ಲಿ ಸದ್ಯ ಇರೋ ಪರಿಸ್ಥಿತಿಯನ್ನೇ ಮುಂದುವರಿಸಲಾಗಿದೆ. ಆದ್ರೆ 10 ಪರ್ಸೆಂಟ್​​ಗೂ ಅಧಿಕ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳೇ ಮುಂದುವರಿಯಲಿವೆ. ಆದ್ರೂ ಸಂಜೆ 7ರಿಂದ ಬೆಳಗ್ಗೆ 5 ಗಂಟೆವರೆಗೆ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಇದ್ದೇ ಇರುತ್ತೆ. ಸೋ ಲಾಕ್​ಡೌನ್ ಹೋಯ್ತು.. ಕೊರೋನಾನೂ ಇಲ್ಲ ಏನೂ ಇಲ್ಲ ಅನ್ಕೊಂಡು ಮಾಸ್ಕ್​ ಗಲ್ಲಕ್ಕೆ ಜಾರಿಸ್ಕೊಂಡು, ಗುಂಪು ಗುಂಪಾಗಿ ಓಡಾಡ್ಬೇಡಿ.. ಮೊದಲ ಅಲೆ ಬಳಿಕವೂ ಇದೇ ರೀತಿ ಮಾಡಿ, 2ನೇ ಅಲೆಗೆ ಆಹ್ವಾನ ಕೊಟ್ಟಿದ್ವಿ. ಈಗ ಎರಡನೆ ಅಲೆ ಕಡಿಮೆಯಾದಾಗಲೂ ಅದೇ ತಪ್ಪು ಮಾಡಿ, 3ನೇ ಅಲೆಯನ್ನ ಆಹ್ವಾನಿಸೋದು ಬೇಡ. ಮಾಸ್ಕ್ ಹಾಕೋಣ..ಸಾಮಾಜಿಕ ಅಂತರ ಕಾಪಾಡೋಣ.. ಕೊರೋನಾದ ಮೂರನೇ ಅಲೆಯನ್ನು ತಡೆಯೋಣ ಅಂತ ಸಂಕಲ್ಪ ಮಾಡಿಕೊಳ್ಳಿ.. ಇನ್ನು ಕರ್ನಾಟಕ ಬೆನ್ನಲ್ಲೇ ಇದೇ ಮಾದರಿಯಲ್ಲಿ ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಲಾಕ್​​ಡೌನ್ ಸಡಿಲಗೊಳಿಸಲಾಗಿದೆ. ಆದ್ರೆ ದೆಹಲಿಯಲ್ಲಿ ಈಗಾಗಲೇ ಲಾಕ್​ಡೌನ್​ನಿಂದ ರಿಲೀಫ್ ನೀಡಲಾಗಿದ್ದು, ಪುನಃ ಜನ ಕೊರೋನಾ ನಿಯಮಗಳನ್ನು ಪಾಲಿಸದೇ, ಗುಂಪುಗೂಡೋಕೆ ಶುರು ಮಾಡಿದ್ದಾರೆ, ಮಾಲ್, ಮಾರ್ಕೆಟ್​​​ಗಳು ಜನರಿಂದ ತುಂಬಿ ತುಳುಕುತ್ತಿದೆ. ನಿನ್ನೆಯಷ್ಟೇ ರಾಜ್ಯಗಳಿಗೆ ಪತ್ರ ಬರೆದಿರೋ ಕೇಂದ್ರ ಸರ್ಕಾರ, ಲಾಕ್​ಡೌನ್​ನಿಂದ ರಿಲೀಫ್ ನೀಡಿದ್ರೂ ಕೂಡ ಕೊರೋನಾ ನಿಯಮಗಳು ಸರಿಯಾಗಿ ಪಾಲನೆಯಾಗುವಂತೆ ನೋಡಿಕೊಳ್ಳಿ ಅಂತ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply