ಏಪ್ರಿಲ್‌ 19ಕ್ಕೆ ಮೊದಲ ಹಂತದ ಮತದಾನ: ಅಖಾಡದಲ್ಲಿ ಅಣ್ಣಾಮಲೈ, ಗಡ್ಕರಿ!

masthmagaa.com:

ಇಡೀ ದೇಶವೇ ಕಾದು ಕುಳಿತಿರೋ 18ನೇ ಲೋಕಸಭಾ ಚುನಾವಣೆ ನಾಳೆಯಿಂದ ಶುರುವಾಗಲಿದೆ. ನಾಳೆ ಲೋಕಸಭಾ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಫಸ್ಟ್‌ ಫೇಸ್‌ನಲ್ಲಿ 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆಯಲಿದೆ. ಅದ್ರಲ್ಲಿ ಪ್ರಮುಖವಾಗಿ ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳು, ರಾಜಸ್ಥಾನದ 12, ಸಿಕ್ಕಿಂನ 11, ಉತ್ತರ ಪ್ರದೇಶದ 8, ಬಿಹಾರದ 4 , ಮಧ್ಯಪ್ರದೇಶದ 6, ಮಹಾರಾಷ್ಟ್ರ, ಬಿಹಾರ ಹಾಗೂ ಉತ್ತರಾಖಂಡ ತಲಾ 5 ಸ್ಥಾನಗಳಿಗೆ ಹಾಗೂ ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನಿತಿನ್‌ ಗಡ್ಕರಿ, ಜಿತೇಂದ್ರ ಸಿಂಗ್‌ ಥೋಮರ್‌ ಸೇರಿದಂತೆ 8 ಜನ ಕೇಂದ್ರ ಸಚಿವರು ಚುನಾವಣಾ ಚದುರಂಗದಾಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಒಟ್ಟಾರೆ 1625 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದು, ಅದ್ರಲ್ಲಿ 1490 ಪುರುಷರು, 135 ಮಹಿಳಾ ಅಭ್ಯರ್ಥಿಗಳಿದ್ದಾರೆ. ತಮಿಳುನಾಡಿನ ಕರೂರ್‌ನಲ್ಲಿ​ 54 ಕ್ಯಾಂಡಿಡೇಟ್‌ಗಳು ಕಣಕ್ಕಿಳಿಯೋ ಮೂಲಕ ಅತಿ ಹೆಚ್ಚು ಅಭ್ಯರ್ಥಿಗಳಿರುವ ಲೋಕಸಭಾ ಕ್ಷೇತ್ರವಾದರೆ, ಅತ್ತ ನಾಗಾಲ್ಯಾಂಡ್​ನ ದಿಬ್ರಗಢದಲ್ಲಿ 3 ಜನ ಮಾತ್ರ ಕಣದಲ್ಲಿದ್ದಾರೆ. ಇನ್ನು ಕಣದಲ್ಲಿರೊ ಪ್ರಮುಖ ಅಭ್ಯರ್ಥಿಗಳತ್ತ ಗಮನ ಹರಿಸೊದಾದ್ರೆ ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ, ಜಮುಯಿ ಕ್ಷೇತ್ರದಿಂದ ಚಿರಾಗ್ ಪಾಸ್ವಾನ್, ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ ಅಖಾಡದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply