ಕೊರೋನಾಗೆ ಲೋಕಪಾಲ ಸದಸ್ಯ ನ್ಯಾ. ತ್ರಿಪಾಠಿ ಬಲಿ..!

masthmagaa.com:

ದೆಹಲಿ: ಲೋಕಪಾಲ ಸದಸ್ಯ ನ್ಯಾಯಮೂರ್ತಿ ಎ.ಕೆ. ತ್ರಿಪಾಠಿ ಕೊರೋನಾ ವೈರಸ್​ಗೆ ಬಲಿಯಾಗಿದ್ದಾರೆ ಅಂತ ಮೂಲಗಳು ತಿಳಿಸಿವೆ. 62 ವರ್ಷ ವಯಸ್ಸಿನ ಅವರನ್ನು ಏಪ್ರಿಲ್ 2ರಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬರೋಬ್ಬರಿ ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅವರು ಶನಿವಾರ ರಾತ್ರಿ 8.45ಕ್ಕೆ ಕೊನೆಯುಸಿರೆಳೆದಿದ್ದಾರೆ.

ಅವರ ಪುತ್ರಿ ಹಾಗೂ ಅಡುಗೆ ಕೆಲಸದವರೊಬ್ಬರಿಗೂ ಸೋಂಕು ತಗುಲಿ ಅವರು ಗುಣಮುಖರಾಗಿದ್ದಾರೆ. ಚತ್ತೀಸ್​ಗಢ ಹೈಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ.ಕೆ. ತ್ರಿಪಾಠಿ ಏಮ್ಸ್​ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್​ನ ಐಸಿಯುನಲ್ಲಿದ್ದರು. ಬಳಿಕ ಅವರ ಆರೋಗ್ಯ ಗಂಭೀರವಾಗುತ್ತಿದ್ದಂತೇ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.

ಲೋಕಪಾಲದ ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಎ.ಕೆ. ತ್ರಿಪಾಠಿ ಕೂಡ ಒಬ್ಬರಾಗಿದ್ದರು. ಮಾರ್ಚ್ 20ರಂದು ಕೊನೆಯದಾಗಿ ಕಚೇರಿಗೆ ಹಾಜರಾಗಿದ್ದರು. ಈ ಹಿನ್ನೆಲೆ ಕಚೇರಿಯನ್ನ ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಲೋಕಪಾಲ್​ನ ಎಲ್ಲಾ ಸದಸ್ಯರು ವಾಸಿಸುವ ಅಪಾರ್ಟ್​ಮೆಂಟ್​ ಅನ್ನೂ ಕೂಡ ಸ್ವಚ್ಛಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply