ಒಂಟಿತನ ನಿಮ್ಮನ್ನ ಕಾಡ್ತಿರ್ಬೋದು: ರಾಹುಲ್‌ ಗಾಂಧಿಯವ್ರನ್ನ ವ್ಯಂಗ್ಯ ಮಾಡಿದ ಓವೈಸಿ!

masthmagaa.com:

ತೆಲಂಗಾಣ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಅದ್ರ ಜೊತೆ ರಾಜಕೀಯ ನಾಯಕರು , ಒಬ್ಬರಿಗೊಬ್ರು ಟೀಕೆ ಮಾಡಿಕೊಳ್ಳೋದು ಕೂಡ ಜಾಸ್ತಿಯಾಗ್ತಿವೆ. ʻರಾಹುಲ್‌ ಗಾಂಧಿಯವ್ರೇ, ನಿಮಗೆ 50 ವರ್ಷವಾಗಿದೆ. ಬಹುಶಃ ಒಂಟಿತನ ನಿಮ್ಮನ್ನ ಕಾಡ್ತಿರ್ಬೋದು. ಇದು ನಿಮ್ಮ ನಿರ್ಧಾರ. ನಾವು ಯಾರಿಗೂ ಡಿಸ್ಟರ್ಬ್‌ ಮಾಡೋದಿಲ್ಲ. ಆದ್ರೆ ಯಾರಾದ್ರೂ ನಮ್ಮನ್ನ ಟೀಸ್‌ ಮಾಡಿದ್ರೆ ಮಾತ್ರ ನಾವು ಸುಮ್ಮನೆ ಬಿಡೋದಿಲ್ಲʼ ಅಂತ ವಾಗ್ದಾಳಿ ಮಾಡಿದ್ದಾರೆ. ಅಂದ್ಹಾಗೆ ಓವೈಸಿ ಅವ್ರ ಈ ಹೇಳಿಕೆಗೂ ಮೊದ್ಲು ತೆಲಂಗಾಣದ ರ‍್ಯಾಲಿಯೊಂದ್ರಲ್ಲಿ ರಾಹುಲ್‌ ಗಾಂಧಿ , ʻಓವೈಸಿ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌, ಪ್ರಧಾನಿ ನರೇಂದ್ರ ಮೋದಿಯವ್ರ ಫ್ರೆಂಡ್ಸ್‌. ಇವ್ರಿಬ್ರೂ ಮೋದಿಗೆ ತುಂಬಾ ಹತ್ರ ಅಂತ ಹೇಳಿದ್ರು. ಇದಕ್ಕೆ ಈಗ ಓವೈಸಿ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply