ಅಫ್ಘಾನಿಸ್ತಾನದ ಸ್ಥಿತಿಯನ್ನು ಕಾಶ್ಮೀರಕ್ಕೆ ಹೋಲಿಸಿದ ಮೆಹಬೂಬಾ ಮುಫ್ತಿ!

masthmagaa.com:

ಜಮ್ಮು-ಕಾಶ್ಮೀರ ಮಾಜಿ ಸಿಎಂ ಮಹಬೂಬಾ ಮುಫ್ತಿ, ಅಫ್ಘನಿಸ್ತಾನದ ಪರಿಸ್ಥಿತಿಯನ್ನ ಜಮ್ಮು-ಕಾಶ್ಮೀರಕ್ಕೆ ಹೋಲಿಸಿ, ಕೇಂದ್ರ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ಜಮ್ಮು-ಕಾಶ್ಮೀರದ ಜನ ಇವತ್ತು ಏನನ್ನ ಸಹಿಸಿಕೊಳ್ಳುತ್ತಿದ್ದಾರೋ ಅದಕ್ಕೆ ಧೈರ್ಯ, ತಾಳ್ಮೆ ಬೇಕು. ಆದ್ರೆ ಅವರು ಯಾವತ್ತು ತಾಳ್ಮೆ ಕಳೆದುಕೊಳ್ಳುತ್ತಾರೋ ಅವತ್ತು ನೀವು ಇರಲ್ಲ. ನಾಶವಾಗಿ ಹೋಗ್ತೀರಿ. ಮತ್ತೆ ಮತ್ತೆ ಹೇಳ್ತಾ ಇದ್ದೀನಿ, ನಮ್ಮ ತಾಳ್ಮೆಯನ್ನ ಪರೀಕ್ಷಿಸೋಕೆ ಹೋಗ್ಬೇಡಿ. ನಿಮ್ಮನ್ನ ನೀವು ಸುಧಾರಿಸಿಕೊಳ್ಳಿ, ಅರ್ಥ ಮಾಡಿಕೊಳ್ಳಿ. ನಮ್ಮ ಪಕ್ಕದ ಅಫ್ಘನಿಸ್ತಾನದಲ್ಲಿ ಏನಾಗ್ತಿದೆ ನೋಡಿ. ಬಲಿಷ್ಠ ಅಮೆರಿಕನೇ ಜಾಗ ಖಾಲಿ ಮಾಡಿ ಹೋಗಬೇಕಾಯ್ತು. ನಿಮ್ಗೆ ಈಗಲೂ ಅವಕಾಶವಿದೆ. ಪಾಕಿಸ್ತಾನ ಜೊತೆ ಮಾತುಕತೆ ನಡೆಸಿ. ಜಮ್ಮು-ಕಾಶ್ಮೀರವನ್ನ ತುಂಡು ತುಂಡು ಮಾಡಿರೋ ತಪ್ಪನ್ನ ಸುಧಾರಿಸಿಕೊಳ್ಳಿ. ಇಲ್ಲದಿದ್ರೆ ತುಂಬಾ ಲೇಟ್​ ಆಗಿ ಹೋದ್ರೆ ಕಷ್ಟ ಎಂದಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರ ಸಮಸ್ಯೆಯನ್ನ ಬಗೆಹರಿಸಿ, ಇಲ್ಲದಿದ್ರೆ ತಾಲಿಬಾನಿಗಳ ಥರ ನಾವು ಕೂಡ ನಿಮ್ಮ ವಿರುದ್ಧ ದಂಗೆ ಏಳಬೇಕಾಗುತ್ತೆ ಅನ್ನೋರೀತಿ ಮಾತನಾಡಿದ್ದಾರೆ.

-masthmagaa.com

Contact Us for Advertisement

Leave a Reply