ತಿರುಪತಿ ತಿಮ್ಮಪ್ಪನ ಆಸ್ತಿಯ ರಿವೀಲ್‌..! ಅಬ್ಬಾ.. ಗೋವಿಂದನ ಸಂಪತ್ತು ಎಷ್ಟಿದೆ ಗೊತ್ತಾ?

masthmagaa.com:

ಸಪ್ತಗಿರಿವಾಸ ತಿರುಪತಿ ತಿರುಮಲದ ವೆಂಕಟೇಶ್ವರಸ್ವಾಮಿ ಹೊಂದಿರೋ ಆಸ್ತಿಯ ಬಗ್ಗೆ ಕೊನೆಗೂ ಮಾಹಿತಿ ಹೊರಬಿದ್ದಿದೆ. ತಿಮ್ಮಪ್ಪ ಎಷ್ಟು ಆಸ್ತಿ ಹೊಂದಿದ್ದಾರೆ ಅನ್ನೋ ಬಗ್ಗೆ TTD, ತಿರುಪತಿ ತಿರುಮಲ ದೇವಸ್ಥಾನಂ ಮಾಹಿತಿ ಹಂಚಿಕೊಂಡಿದ್ದು ಗೋವಿಂದನ ಆಸ್ತಿ ಬರೊಬ್ಬರಿ 85,705 ಕೋಟಿ ರೂಪಾಯಿಗಳಷ್ಟು ಇದೆ ದೇವಾಸ್ಥಾನದ ಆಡಳಿತ ಹೇಳಿದೆ. TTD ಚೇರ್ಮನ್‌ YV ಸುಬ್ಬರೆಡ್ಡಿ ಈ ಬಗ್ಗೆ ಇನ್ಫರ್ಮೇಷನ್‌ ಕೊಟ್ಟಿದ್ದಾರೆ. ದೇಶಾದ್ಯಂತ ಶ್ರೀನಿವಾಸನ ಹೆಸರಲ್ಲಿ 960 ಪ್ರಾಪರ್ಟೀಸ್‌ ಲೊಕೇಷನ್‌ಗಳಲ್ಲಿ ಸುಮಾರು 7,123 ಎಕರೆ ಭೂ ಆಸ್ತಿ ಇದೆ ಅಂತ ಹೇಳಿದ್ದಾರೆ. ಇನ್ನು ಇದೇ ವೇಳೆ 1973 ರಿಂದ 2014ರವರೆಗೆ ದೇವಸ್ಥಾನಕ್ಕೆ ಸೇರಿದ ಸುಮಾರು 113 ಪ್ರಾಪರ್ಟೀಸ್‌ಗಳನ್ನ ವಿಲೇವಾರಿ ಮಾಡಲಾಗಿದೆ. ಆದ್ರೆ 2014ರಿಂದ ಯಾವುದೇ ಸೆಟಲ್‌ಮೆಂಟ್‌ ಮಾಡಿಲ್ಲ ಅಂತ ಟ್ರಸ್ಟ್‌ ಹೇಳಿದೆ. ಅಂದ್ಹಾಗೆ ಪ್ರಸ್ತುತ ತಿಮ್ಮಪ್ಪನ ಹೆಸರಿನಲ್ಲಿ ದೇಶಾದ್ಯಂತ ವಿವಿಧ ಬ್ಯಾಂಕ್‌ಗಳಲ್ಲಿ 14 ಸಾವಿರ ಕೋಟಿಗೂ ಅಧಿಕ ಫಿಕ್ಸಡ್‌ ಡೆಪಾಸಿಟ್‌ ಇದೆ. ಸುಮಾರು 14 ಟನ್‌ನಷ್ಟು ಬಂಗಾರ ಇದೆ. ಇನ್ನು ಜಗತ್ತಿನ ಅತೀ ಶ್ರೀಮಂತ ದೇವಾಸ್ಥಾನ ಅಂತ ಕೂಡ ತಿರುಮಲ ವೆಂಕಟೇಶ್ವರ ದೇವಸ್ಥಾನವನ್ನ ಕರೆಯಲಾಗುತ್ತೆ. ಕೇರಳದ ಅನಂತ ಪದ್ಮನಾಭನ ನಿಗೂಢ ಸಂಪತ್ತನ್ನ ಹೊರತು ಪಡಿಸಿದ್ರೆ ಗೋವಿಂದನೇ ಜಗತ್ತಿನ ಅತ್ಯಂತ ಶ್ರೀಮಂತ ದೇವರು. ಯಾಕಂದ್ರೆ ಪ್ರತಿದಿನ ಶ್ರೀನಿವಾಸನ ಸನ್ನಿಧಾನಕ್ಕೆ ಭೇಟಿ ನೀಡೋರ ಸಂಖ್ಯೆ ಪ್ರತಿದಿನ 60,000 ದಿಂದ 80,000ವನ್ನ ದಾಟುತ್ತೆ ಅಂತ ದೇವಾಸ್ಥಾನ ಆಡಳಿತದ ಅಂಕಿ ಅಂಶಗಳು ಹೇಳ್ತಿವೆ.

-masthmagaa.com

Contact Us for Advertisement

Leave a Reply