ಕೊರೋನಾ ವೈರಸ್: 3,000 ಗಡಿ ದಾಟಿದ ಸಾವಿನ ಸಂಖ್ಯೆ

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 3,000 ಗಡಿ ದಾಟಿದೆ. ಈ ಪೈಕಿ ಡ್ರ್ಯಾಗನ್ ದೇಶವೊಂದರಲ್ಲೇ 2,915 ಜನ ಮೃತಪಟ್ಟಿದ್ದು, ಇದುವರೆಗೆ 80,000ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಚೀನಾ ಹೊರತುಪಡಿಸಿ ಸುಮಾರು 60 ದೇಶಗಳಿಗೂ ಕೊರೋನಾ ವೈರಸ್ ಹರಡಿದ್ದು, 140 ಜನ ಬಲಿಯಾಗಿದ್ದಾರೆ. ಈ ಪೈಕಿ ಇರಾನ್​ನಲ್ಲಿ ಅತಿ ಹೆಚ್ಚು 54, ಇಟಲಿಯಲ್ಲಿ 34 ಹಾಗೂ ದಕ್ಷಿಣ ಕೊರಿಯಾದಲ್ಲಿ 22 ಜನ ಮೃತಪಟ್ಟಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ ಹಾಗೂ ಥಾಯ್​ಲ್ಯಾಂಡ್​ನಲ್ಲಿ ಭಾನುವಾರ ಮೊದಲ ಸಾವು ಸಂಭವಿಸಿದ್ದು ಆತಂಕ ಹೆಚ್ಚಿಸಿದೆ.

ಇನ್ನು ಜಗತ್ತಿನಲ್ಲಿ ಅತಿ ಹೆಚ್ಚು ಜನ ಭೇಟಿ ನೀಡೋ ಫ್ರಾನ್ಸ್​ನ ಲೌರೆ ಮ್ಯೂಸಿಯಂನ ಬಾಗಿಲನ್ನು ಮಾರ್ಚ್​ 1ರಿಂದ ಮುಚ್ಚಲಾಗಿದೆ. ಕೊರೋನಾ ಭೀತಿ ಹಿನ್ನೆಲೆ ವಸ್ತು ಸಂಗ್ರಹಾಲಯದ ಸಿಬ್ಬಂದಿ ಕೆಲಸ ಮಾಡಲು ನಿರಾಕರಿಸಿದ್ದೇ ಇದಕ್ಕೆ ಕಾರಣ. ಈ ಸಂಬಂಧ ಮ್ಯೂಸಿಯಂನ ಆಡಳಿತ ಮಂಡಳಿ ಭಾನುವಾರ ಪ್ರಕಟಣೆ ಹೊರಡಿಸಿದೆ.

Contact Us for Advertisement

Leave a Reply