ಇವತ್ತು ಬೈಡೆನ್- ಪುಟಿನ್..1985ರಲ್ಲಿ ರೊನಾಲ್ಡ್ ರೀಗನ್​-ಗೋರ್ಬಚೆವ್​​!

masthmagaa.com:

ಇವತ್ತು ಸ್ವಿಡ್ಜರ್​ಲ್ಯಾಂಡ್​​​​​ನ ಜಿನೇವಾದಲ್ಲಿ ಬೈಡೆನ್​​​-ಪುಟಿನ್ ಭೇಟಿಯಾಗ್ತಿದ್ದಾರೆ. 2018ರಲ್ಲಿ ಫಿನ್ಲ್ಯಾಂಡ್​​ನ ಹೆಲ್ಸಿಂಕಿಯಲ್ಲಿ ಟ್ರಂಪ್-ಪುಟಿನ್ ಭೇಟಿಯಾಗಿದ್ರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಉಭಯದೇಶಗಳ ಅಧ್ಯಕ್ಷರು ಭೇಟಿಯಾಗ್ತಿದ್ದಾರೆ. ಅದ್ರಲ್ಲೂ ಈ ಭೇಟಿಯನ್ನು 1985ರ ರೊನಾಲ್ಡ್​ ರೀಗನ್​​ ಮತ್ತು ಮಿಖಾಯಲ್ ಗೋರ್ಬಚೆವ್​​ ಭೇಟಿಗೆ ಹೋಲಿಕೆ ಮಾಡಲಾಗ್ತಿದೆ. ಯಾಕಂದ್ರೆ 1985ರಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರ ತಾರಕಕ್ಕೆ ಏರಿತ್ತು. ಆದ್ರೆ ಮಿಖಾಯಲ್ ಗೋರ್ಬಚೆವ್ ಸೋವಿಯತ್ ಒಕ್ಕೂಟದ ಅಧ್ಯಕ್ಷರಾದ ಬಳಿಕ ಶೀತಲ ಸಮರದ ಕಾವು ಕಡಿಮೆಯಾಗೋಕೆ ಶುರುವಾಗಿತ್ತು. ಇದೇ ಸಮಯದಲ್ಲಿ 1985ರಲ್ಲಿ ಮೊಟ್ಟ ಮೊದಲ ಬಾರಿಗೆ ಜಿನೇವಾದಲ್ಲಿ ನಡೆದ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೀಗನ್ ಮತ್ತು ಸೋವಿಯತ್ ಒಕ್ಕೂಟದ ಅಧ್ಯಕ್ಷ ಮಿಖಾಯಲ್ ಗೋರ್ಬಚೆವ್ ಭೇಟಿಯಾಗಿದ್ರು. ಈ ಭೇಟಿಯಲ್ಲಿ ಉಭಯನಾಯಕರು ಪರಮಾಣು ಶಸ್ತ್ರಾಸ್ತ್ರಗಳನ್ನು ಕಡಿಮೆ ಮಾಡೋ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ರು. ಇದಾದ ಬಳಿಕವೇ ಶೀತಲ ಸಮರ ಅಂತ್ಯದತ್ತ ಸಾಗಿ, ಅಮೆರಿಕ- ರಷ್ಯಾ ನಡುವಿನ ಸಂಬಂಧ ಸುಧಾರಿಸೋಕೆ ಶುರುವಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಈಗ ಉಭಯದೇಶಗಳ ಸಂಬಂಧ ತುಂಬಾ ಹದಗೆಟ್ಟು ಹೋಗಿದೆ. ಇಂಥಾ ಹೊತ್ತಲ್ಲಿ ಅದೇ ಜಿನೇವಾದಲ್ಲಿ ಬೈಡೆನ್-ಪುಟಿನ್ ಮುಖಾಮುಖಿಯಾಗ್ತಿದ್ದಾರೆ. ಆದ್ರೆ ಈ ಭೇಟಿಯಲ್ಲಿ ಉಭಯದೇಶಗಳ ನಡುವಿನ ಸಂಬಂಧ ಸುಧಾರಿಸೋ ಸಾಧ್ಯತೆ ಕಡಿಮೆ ಇದೆ ಅಂತ ತಜ್ಞರು ಅಂದಾಜಿಸಿದ್ದಾರೆ. ಅಂದಹಾಗೆ ಈ ಭೇಟಿಯನ್ನು ಕವರ್ ಮಾಡೋಕೆ ಜಗತ್ತಿನ ಮೂರೂವರೆ ಸಾವಿರ ಪತ್ರಕರ್ತರು ಜಿನೇವಾದಲ್ಲಿ ಸೇರಿದ್ದಾರೆ.

-masthmagaa.com

Contact Us for Advertisement

Leave a Reply