ಇಂದು ಮಧ್ಯರಾತ್ರಿ ಭಾಗಶಃ ಚಂದ್ರಗ್ರಹಣದ ದರ್ಶನ: ಭಾರತದಲ್ಲಿ ಗೋಚರಿಸಲಿದ್ಯಾ?

masthmagaa.com:

ಭಾರತ ಸೇರಿದಂತೆ ಸಂಪೂರ್ಣ ಏಷ್ಯಾ, ಯುರೋಪ್‌, ರಷ್ಯಾದಲ್ಲಿ ಇಂದು ರಾತ್ರಿ ಭಾಗಶಃ ಚಂದ್ರ ಗ್ರಹಣ ಗೋಚರಿಸಲಿದೆ. ಇಂದು ಮಧ್ಯರಾತ್ರಿ 1:06ಕ್ಕೆ ಚಂದ್ರ ಗ್ರಹಣ ಶುರುವಾಗಿ 2:23ಕ್ಕೆ ಮುಕ್ತಾಯಗೊಳ್ಳಲಿದೆ. ಇದು ಅತ್ಯಂತ ಪ್ರಭಾವಶಾಲಿಯಾಗಿ ಅಕ್ಟೋಬರ್‌ 29ರ ತಡರಾತ್ರಿ 1:45ಕ್ಕೆ ಗೋಚರಿಸಲಿದೆ ಎನ್ನಲಾಗಿದೆ. ಈ ಬಾರಿಯ ಚಂದ್ರ ಗ್ರಹಣ ಭಾರತದ ಎಲ್ಲಾ ಭಾಗಗಳಲ್ಲಿಯೂ ಗೋಚರಿಸಲಿದೆ ಅಂತ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಅಕ್ಟೋಬರ್‌ 28 ರಿಂದ 29 ರವರೆಗೆ ಗೋಚರಿಸೋ ಚಂದ್ರ ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸಂಜೆ ಪೂಜಾ ಸಮಯದಲ್ಲಿ ವ್ಯತ್ಯಾಸಗಳನ್ನ ಮಾಡಲಾಗಿದೆ. ಅಂದ್ಹಾಗೆ ಇಂದು ಗೋಚರಿಸಲಿರೋ ಚಂದ್ರ ಗ್ರಹಣ ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply