ಪುಟಿನ್‌-ಮ್ಯಾಕ್ರಾನ್‌ ದೂರ ದೂರ! ಬಯಲಾಯ್ತು ಕಾರಣ!

masthmagaa.com:

ಉಕ್ರೇನ್‌ ವಿಚಾರವಾಗಿ ಫ್ರಾನ್ಸ್‌ , ರಷ್ಯಾ ಜೊತೆ ಮೀಟಿಂಗ್‌ ಮಾಡೊಕೆ ಹೋಗಿದ್ದಾಗ ಪೋಟೋವೊಂದು ಸಖ್ಖತ್‌ ಸುದ್ದಿಯಾಗಿತ್ತು. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರಾನ್‌ ಹಾಗು ರಷ್ಯಾ ಪ್ರೆಸಿಡೆಂಟ್‌ ಪುಟಿನ್‌ ಇಬ್ರೂ ಮೀಟಿಂಗ್‌ ನಡೆಸ್ತಾ ಇದ್ದಾಗ ಬಾರಿ ದೂರ-ದೂರ ಕೂತಿದ್ರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಷ್ಯಾ ಅಧಿಕಾರಿಗಳು “ಫ್ರಾನ್ಸ್‌ ಅಧ್ಯಕ್ಷರು ಕೊರೊನಾ ಟೆಸ್ಟ್‌ ಮಾಡ್ಸ್ಕೊಳ್ಳೋಕೆ ಒಪ್ಪಿರ್ಲಿಲ್ಲ, ಅದಕ್ಕೆ ಉಭಯ ನಾಯಕರು ದೂರದಲ್ಲೇ ಕೂತು ಮೀಟಿಂಗ್‌ ಮಾಡ್ಬೇಕಾಯ್ತು” ಅಂತಾ ಮಾಹಿತಿ ನೀಡಿದ್ದಾರೆ. ಅಂದಹಾಗೆ ಕೋವಿಡ್‌ ಬಗ್ಗೆ ಫುಲ್‌ ಅಲರ್ಟ್‌ ಆಗಿರೋ ರಷ್ಯಾ ಫಾರಿನ್‌ನಿಂದ ಬಂದೋರನ್ನ ಕಡ್ಡಾಯವಾಗಿ ಕೊರೊನಾ ಟೆಸ್ಟ್‌ ಗೆ ಒಳಪಡಿಸ್ತಿದೆ.

-masthmagaa.com

Contact Us for Advertisement

Leave a Reply