ಬಯೋ- ಇ ಲಸಿಕೆ 90% ಪರಿಣಾಮಕಾರಿ, ಕೊರೋನಾ ಹೋರಾಟಕ್ಕೆ ಗೇಮ್​​ ಚೇಂಜರ್!

masthmagaa.com:

ಬಯೋಲಾಜಿಕಲ್ ಇ ಸಂಸ್ಥೆಯ ಲಸಿಕೆ 90 ಪರ್ಸೆಂಟ್​​​ನಷ್ಟು ಪರಿಣಾಮಕಾರಿಯಾಗಿರೋ ಸಾಧ್ಯತೆ ಇದ್ದು, ಕೊರೋನಾ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಆಗಲಿದೆ ಅಂತ ಸೆಂಟರ್ ಕೋವಿಡ್ ವರ್ಕಿಂಗ್ ಗ್ರೂಪ್​​​ನ ಮುಖ್ಯಸ್ಥ ಎನ್​​​.ಕೆ ಅರೋರಾ ಹೇಳಿದ್ದಾರೆ. ಲಸಿಕೆ ಸದ್ಯ 3ನೇ ಹಂತದ ಪ್ರಯೋಗಕ್ಕೆ ಕಾಲಿಡ್ತಿದ್ದು, ಅಕ್ಟೋಬರ್ ವೇಳೆಗೆ ಲಭ್ಯವಾಗಲಿದೆ. ಇದನ್ನು ಕೋರ್ಬಿವ್ಯಾಕ್ಸ್​ ಅಂತ ಕರೆಯಲಾಗುತ್ತೆ. ಇದು ನೋವಾವ್ಯಾಕ್ಸ್ ರೀತಿಯಲ್ಲೇ ಇರಲಿದೆ ಅಂತ ಹೇಳಿದ್ದಾರೆ. ನೋವಾವ್ಯಾಕ್ಸ್ ಅನ್ನೋದು ಅಮೆರಿಕದ ಸಂಸ್ಥೆಯಾಗಿದ್ದು, ಇದು ರೂಪಾಂತರಿ ತಳಿಗಳಿಗೂ 90 ಪರ್ಸೆಂಟ್ ಪರಿಣಾಮಕಾರಿ ಅಂತ ಪ್ರಯೋಗದಲ್ಲಿ ಗೊತ್ತಾಗಿದೆ. ನೊವಾವ್ಯಾಕ್ಸ್​ನ್ನು ದೇಶದಲ್ಲಿ ಸೇರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಉತ್ಪಾದನೆ ಮಾಡಲಿದ್ದು, ವರ್ಷಕ್ಕೆ 100 ಕೋಟಿ ಡೋಸ್ ಉತ್ಪಾದನೆಯ ಗುರಿ ಹೊಂದಿದೆ. ಬೆಲೆ ಕೂಡ ಕಡಿಮೆಯೇ ಇರಲಿದೆ ಅಂತ ಕೂಡ ಎನ್​ಕೆ ಅರೋರಾ ಮಾಹಿತಿ ನೀಡಿದ್ಧಾರೆ. ಅದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಸೇರಂ ಇನ್​​ಸ್ಟಿಟ್ಯೂಟ್​​​, ಸೆಪ್ಟೆಂಬರ್ ವೇಳೆಗೆ ಲಸಿಕೆಯನ್ನು ಮಾರುಕಟ್ಟೆಗೆ ತರೋ ವಿಶ್ವಾಸ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply