ಯುದ್ಧಪೀಡಿತ ಯೆಮೆನ್​ಗೆ ಬಂತು ಮೇಡ್ ಇನ್ ಇಂಡಿಯಾ ಲಸಿಕೆ

masthmagaa.com:

ಯುದ್ಧಪೀಡಿತ ಯೆಮೆನ್​ನಲ್ಲಿ ಭಾರತದ ಕೋವಿಶೀಲ್ಡ್​ ಲಸಿಕೆಯ 3.60 ಲಕ್ಷ ಡೋಸ್​ಗಳು ರೀಚ್ ಆಗಿದೆ. 2015ರಿಂದ ಯೆಮೆನ್​ನ ತಾತ್ಕಾಲಿಕ​ ರಾಜಧಾನಿಯಾಗಿರೋ ಏಡೆನ್​ ಏರ್​ಪೋರ್ಟ್​ನಲ್ಲಿ ವ್ಯಾಕ್ಸಿನ್​ ಬಂದಿಳಿದಿದೆ. ಕೊರೋನಾ ಸೋಂಕಿನ ಎರಡನೇ ಅಲೆಗೆ ತತ್ತರಿಸಿರೋ ಯೆಮೆನ್​ನಲ್ಲಿ ಅಲ್ಲಿನ ಇಂಟರ್​ನ್ಯಾಷನಲಿ ರೆಕಗ್​ನೈಝ್ಡ್​ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿತ್ತು. ಇದರ ಬೆನ್ನಲ್ಲೇ ಭಾರತದ ಲಸಿಕೆ ಯೆಮೆನ್ ತಲುಪಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಗವಿಯ ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಅಲ್ಲಿಗೆ ಲಸಿಕೆ ಕಳಿಸಿಕೊಡಲಾಗಿದೆ.

-masthmagaa.com

Contact Us for Advertisement

Leave a Reply