ಎಮ್ಮೆ ಸರಿಯಾಗಿ ಹಾಲು ಕೊಡ್ತಿಲ್ಲ ಸಾರ್: ಪೊಲೀಸರಿಗೆ ವ್ಯಕ್ತಿ ದೂರು

masthmagaa.com:

ಎಮ್ಮೆ ಹಾಲು ಕೊಡ್ತಿಲ್ಲ ಅಂತ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಧ್ಯಪ್ರದೇಶದ ಬಿಂಡ್​ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ಬಾಬುಲಾಲ್ ಜಾಟವ್​​​ ಎಂಬ ವ್ಯಕ್ತಿ, ನನ್ನ ಎಮ್ಮೆ ಕೆಲವು ದಿನಗಳಿಂದ ಹಾಲು ಕೊಡಲು ನಿರಾಕರಿಸುತ್ತಿದೆ. ಇದಕ್ಕೆ ಯಾರೋ ವಾಮಾಚಾರ ಮಾಡಿಸಿರುವ ಬಗ್ಗೆ ನನಗೆ ಸಂದೇಹ ಇದೆ. ಊರಿನವರು ಕೂಡ ಅದನ್ನೇ ಹೇಳುತ್ತಿದ್ದಾರೆ ಅಂತ ದೂರು ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ನಂತರ ಪೊಲೀಸಸರು ಆ ವ್ಯಕ್ತಿಗೆ ಪಶುವೈದ್ಯರ ಬಳಿ ತೋರಿಸುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ. ನಂತರ ಇವತ್ತು ಠಾಣೆಗೆ ಬಂದ ವ್ಯಕ್ತಿ, ಎಮ್ಮೆ ಸರಿಯಾಗಿ ಹಾಲು ಕೊಡ್ತಿದೆ ಅಂತ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply