ಪಾಕ್, ಅಫ್ಘನ್ ಮದರಸಾಗಳಲ್ಲಿ ಉಗ್ರರ ಸೃಷ್ಟಿ: ಸಂಶೋಧಕಿ

masthmagaa.com:

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರೋ ಮದರಸಾಗಳ ಬಗ್ಗೆ ಯೂರೋಪಿಯನ್ ಫೌಂಡೇಷನ್​​ ಫರ್ ಸೌಥ್ ಏಷ್ಯನ್ ಸ್ಟಡೀಸ್​ನ ಸಂಶೋಧಕಿ ಅನ್ನೆ ಹೆಕೆಂಡೋರ್ಫ್​​​​​ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೇಂದ್ರಗಳು ಭಯೋತ್ಪಾದನೆಯನ್ನು ಬೆಳೆಸೋ ನೆಲೆಗಳಾಗಿ ಬದಲಾಗುತ್ತಿವೆ ಅಂತ ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ 48ನೇ ಮಾನವ ಹಕ್ಕು ಅಧಿವೇಶನದಲ್ಲಿ ಮಾತನಾಡಿದ ಅವರು, ದಕ್ಷಿಣ ಏಷ್ಯಾದಲ್ಲಿ ಧಾರ್ಮಿಕ ಶಾಲೆಗಳ ಮೂಲಕವೇ ಭಯೋತ್ಪಾದನೆ ಭೀತಿ ಹೆಚ್ಚಾಗ್ತಿದೆ ಅನ್ನೋದು ಗೊತ್ತಿರೋ ವಿಚಾರ.. ಇಲ್ಲಿ ಇಸ್ಲಾಂ ತತ್ವಗಳನ್ನು ತಿರುಚಿ ಭಯೋತ್ಪಾದನೆ ಬೀಜಗಳನ್ನು ಬಿತ್ತಲಾಗುತ್ತಿದೆ. ಇಂದಿಗೂ ಈ ಶಾಲೆಗಳು ಯಾವುದೇ ಅಡೆತಡೆಯಿಲ್ಲದೇ ಸಮೃದ್ಧವಾಗಿ ಬೆಳೆಯುತ್ತಿವೆ ಅಂತ ಹೇಳಿದ್ದಾರೆ. ತಾಲಿಬಾನ್, ಹಕ್ಕಾನಿ ನೆಟ್ವರ್ಕ್​ ಕೂಡ ಪಾಕಿಸ್ತಾನದ ಇದೇ ರೀತಿಯ ಮದರಸಾಗಳಿಂದ ಹುಟ್ಟಿಕೊಂಡಿದೆ. ಪಾಕ್​ನಲ್ಲಿ ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹ್ಮದ್ ಸೇರಿದಂತೆ ಹಲವು ಸಂಘಟನೆಗಳು ಈ ರೀತಿಯ ಉಗ್ರರ ಫ್ಯಾಕ್ಟರಿಗಳನ್ನು ನಡೆಸುತ್ತಿವೆ. ಅದಕ್ಕೆ ದೇಶದ ಗುಪ್ತಚರ ಇಲಾಖೆಯ ಬೆಂಬಲ ಕೂಡ ಇದೆ. ಈ ಮೂಲಕ ಕೆಲವೊಂದು ಧಾರ್ಮಿಕ ಕೇಂದ್ರ ಮತ್ತು ಮದರಸಾಗಳು ಯುವಕರನ್ನು ಜಿಹಾದ್​​ನತ್ತ ದೂಡ್ತಿದ್ದಾರೆ ಅಂತ ಆರೋಪಿಸಿದ್ದಾರೆ ಅನ್ನೆ ಹೆಕೆಂಡೋರ್ಫ್​​.

-masthmagaa.com

Contact Us for Advertisement

Leave a Reply