ಸ್ವೀಡನ್​​ಗೆ ಮೊದಲ ಮಹಿಳಾ ಪ್ರಧಾನಿ! ಯಾರು ಗೊತ್ತಾ?

masthmagaa.com:

ಸ್ವೀಡನ್ ರಾಜಕೀಯದಲ್ಲಿ ಇತ್ತೀಚೆಗೆ ಭಾರಿ ಬದಲಾವಣೆಗಳಾಗ್ತಿವೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೆಗ್ಡಾಲಿನಾ ಅಂಡರ್​​ಸನ್ ಮತ್ತೆ ಸ್ವೀಡನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಸ್ವೀಡನ್​​ನಲ್ಲಿ ಮಹಿಳೆಯೊಬ್ಬರು ಪ್ರಧಾನಿಯಾದಂತಾಗಿದೆ. ಕಳೆದ ವಾರವಷ್ಟೇ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷ ಮತ್ತು ಜ್ಯೂನಿಯರ್ ಗ್ರೀನ್ ಪಾರ್ಟಿ ಸರ್ಕಾರ ರಚಿಸಿದ್ವು. ಮೆಗ್ಡಾಲಿನಾ ಅಂಡರ್​ಸನ್​​​​​​ರನ್ನು ಪ್ರಧಾನಿಯಾಗಿಯೂ ನಿಯೋಜಿಸಲಾಗಿತ್ತು. ಆದ್ರೆ ನಂತರದಲ್ಲಿ ಗ್ರೀನ್ ಪಾರ್ಟಿ ಬೆಂಬಲ ವಾಪಸ್ ಪಡೆದುಕೊಂಡಿದ್ದರಿಂದ ಅವರು ಅಧಿಕಾರ ವಹಿಸಿಕೊಳ್ಳೋದಕ್ಕೂ ಮುನ್ನವೇ ರಾಜೀನಾಮೆ ನೀಡಿದ್ರು. ಈಗ 349 ಮಂದಿ ಸದಸ್ಯರ ಪೈಕಿ 101 ಮಂದಿ ಮೆಗ್ಡಾಲಿನ ಪರವಾಗಿ ಮತ ಹಾಕಿದ್ರೆ, 173 ಮಂದಿ ವಿರುದ್ಧವಾಗಿ ಮತ ಹಾಕಿದ್ದಾರೆ. ಇನ್ನುಳಿದಂತೆ 75 ಮಂದಿ ಗೈರಾಗಿದ್ರು. ಸ್ವೀಡನ್ ಸಂವಿಧಾನದ ಪ್ರಕಾರ ಯಾವುದೇ ಒಬ್ಬ ಅಭ್ಯರ್ಥಿಗೆ 175 ಮಂದಿ ವಿರುದ್ಧವಾಗಿ ಮತ ಹಾಕದೇ ಇದ್ರೆ ಪ್ರಧಾನಿಯಾಗಿ ಆಯ್ಕೆಯಾಗಬಹುದು. ಅದರಂತೆಯೇ ಮೆಗ್ಡಾಲಿನಾ ಅಂಡರ್​​ಸನ್ ಪ್ರಧಾನಿಯಾಗಿದ್ದಾರೆ. ಈವರೆಗೆ ಮೆಗ್ಡಾಲಿನಾ ಹಣಕಾಸು ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ರು.

-masthmagaa.com

Contact Us for Advertisement

Leave a Reply