ಮಹಾಭಾರತದ ಶಕುನಿ “ಗೂಫಿ ಪೈಂತಲ್” ಇನ್ನಿಲ್ಲ !

masthmagaa.com:

ಮಹಾಭಾರತ ಸೀರಿಯಲ್‌ನಲ್ಲಿ ಶಕುನಿ ಪಾತ್ರ ಮಾಡಿ ಜನಮನ್ನಣೆ ಪಡೆದಿದ್ದ ನಟ ಗೂಫಿ ಪೈಂತಲ್ ಇಂದು (ಜೂನ್‌ 5) ಇಹಲೋಕ ತ್ಯಜಿಸಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲ್ತಾ ಇದ್ದು, ಇವರನ್ನ ಆಸ್ಪತ್ರೆಗೂ ಕೂಡ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ ಅವರು ಈ ನೋವಿನ ಸಂಗತಿ ಹಂಚಿಕೊಂಡಿದ್ದಾರೆ.

‘ದುರದೃಷ್ಟವಶಾತ್ ಗೂಫಿ ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಯಾವುದೇ ನೋವಿಲ್ಲದೆ ಅವರು ಮೃತಪಟ್ಟರು’ ಅಂತ ಹಿತೇನ್ ಮಾಹಿತಿ ನೀಡಿದ್ದಾರೆ.

ಇಂದು ಗೂಫಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಮುಂಬೈ ಅಂಧೇರಿಯ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

-masthmagaa.com

Contact Us for Advertisement

Leave a Reply