16 ತಿಂಗಳ ಮಗುವನ್ನು ಬರ್ಬರವಾಗಿ ಹತ್ಯೆಗೈದ ತಂದೆ-ತಾಯಿ!

masthmagaa.com:

ಮಹಾರಾಷ್ಟ್ರದ ಸೋಲಾಪುರ್​​ನಲ್ಲಿ ತಮ್ಮದೇ ಮಗುವನ್ನು ಹತ್ಯೆಗೈದ ದಂಪತಿಯನ್ನು ರೈಲ್ವೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಜರಾತ್​​ನಿಂದ ತೆಲಂಗಾಣದ ಸಿಕಂದರಾಬಾದ್​​ಗೆ ಹೊರಟಿದ್ದ ರೈಲಿನಲ್ಲಿ ಈ ದಂಪತಿ ಪ್ರಯಾಣಿಸ್ತಿದ್ರು. ಈ ವೇಳೆ ಮಗು ಚಲನೆ ಇರಲಿಲ್ಲ. ಹೀಗಾಗಿ ಸಹ ಪ್ರಯಾಣಿಕರ ಮಾಹಿತಿ ಮೇರೆಗೆ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಅದು ಜೀವಂತವಾಗಿಲ್ಲ ಅನ್ನೋದು ಗೊತ್ತಾಯ್ತು. ವಿಚಾರಣೆ ವೇಳೆ ಮಗುವನ್ನು ತಂದೆಯೇ ಲೈಂಗಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದು, ಮತ್ತು ಅದಕ್ಕೆ ತಾಯಿ ಸಹಕರಿಸಿದ್ದು ಗೊತ್ತಾಗಿದೆ. ಅಷ್ಟೇ ಅಲ್ಲ.. ಮಗುವನ್ನು ತಮ್ಮ ನೇಟಿವ್ ಸಿಕಂದರಾಬಾದ್​​ನಲ್ಲಿ ಅಂತ್ಯಸಂಸ್ಕಾರ ಮಾಡಕ್ಕೆ ತಗೊಂಡು ಹೋಗ್ತಿದ್ರು ಅಂತ ಕೂಡ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply