ಪೊಲೀಸರ ಮೇಲೆ ಆರೋಪ ಮಾಡಿದ್ದ ಸಂಸದೆಗೆ ಪೊಲೀಸರು ತಿರುಗೇಟು!

masthmagaa.com:

ಪೊಲೀಸರು ನಮ್ಮೊಂದಿಗೆ ಸರಿಯಾಗಿ ನಡೆದುಕೊಳ್ತಿಲ್ಲ, ನಮ್ಮನ್ನ ಪೀಡಿಸ್ತಾಯಿದ್ದಾರೆ ಅಂತ ಆರೋಪಿಸಿದ್ದ ಮಹಾರಾಷ್ಟ್ರ ಸಂಸದೆ ನವನೀತ್‌ ರಾಣಾ ದಂಪತಿಯ ಆರೋಪದ ಸತ್ಯ ಸಂಗತಿ ಈಗ ಬೆಳಕಿಗೆ ಬರ್ತಾಯಿದೆ. ರಾಣಾ ಆರೋಪಕ್ಕೆ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ಕೊಟ್ಟಿದ್ದಾರೆ ಪೋಲೀಸರು. ಅದರಲ್ಲಿ ಅರೆಸ್ಟ್ ಆಗಿರೋ ರಾಣಾ ದಂಪತಿಗೆ ಟೇಬಲ್‌ ಮೇಲೆ ಕೂರಿಸಿ ಟೀ ಕೊಟ್ಟು ಅತಿಥಿ ಸತ್ಕಾರ ಮಾಡಿರೋದು ಗೊತ್ತಾಗಿದೆ. ಅಂದ್ಹಾಗೆ ಪೊಲೀಸರ ಮೇಲೇ ರಾಣಾ ದಂಪತಿ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ರಿಪೋರ್ಟ್ ಕೊಡುವಂತೆ ಕೇಂದ್ರ ಗೃಹ ಇಲಾಖೆ ಮಹಾರಾಷ್ಟ್ರ ಪೊಲೀಸರಿಗೆ ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ಪೊಲೀಸರು ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿಎಂ ಉದ್ದವ್‌ ಠಾಕ್ರೆ ಮನೆ ಮುಂದೆ ಹನುಮಾನ್‌ ಚಾಲೀಸ ವಿಚಾರವಾಗಿ ಗಲಾಟೆ ಮಾಡಿದ್ದ ರಾಣಾ ದಂಪತಿ ಸದ್ಯ ಜೈಲಿನಲ್ಲಿದ್ದಾರೆ.

-masthmagaa.com

Contact Us for Advertisement

Leave a Reply