ಕೊರೋನ ಲಸಿಕೆ ಹಾಕಿಸಿಕೊಂಡರೆ ಮೈಗೆ ಮ್ಯಾಗ್ನೆಟ್ ಶಕ್ತಿ?!

masthmagaa.com:

ಮಹಾರಾಷ್ಟ್ರದ ನಾಶಿಕ್ ನಲ್ಲಿ ವ್ಯಕ್ತಿಯೊಬ್ಬ ಲಸಿಕೆ ಹಾಕಿಸಿಕೊಂಡ ನಂತರ ತನಗೆ ಮ್ಯಾಗ್ನೆಟಿಕ್ ಪವರ್ ಬಂದಿದೆ ಅಂತ ಹೇಳಿದ ಬೆನ್ನಲ್ಲೇ, ಮಹಾರಾಷ್ಟ್ರದ ಉಲ್ಲಾಸ್ ನಗರದ ವ್ಯಕ್ತಿಯೊಬ್ಬ ಇದೇ ಥರ ಹೇಳಿಕೊಂಡು ವಿಡಿಯೋ ಮಾಡಿದ್ದಾನೆ. ಕೊರೋನ ಲಸಿಕೆ ಹಾಕಿಸಿಕೊಂಡ ಬಳಿಕ ತನಗೆ ಕಾಂತೀಯ ಶಕ್ತಿ, ಮ್ಯಾಗ್ನೆಟಿಕ್ ಪವರ್ ಬಂದಿದೆ ಅಂತ ಹೇಳಿರೋ ಭೂಪ ಮೈಗೆಲ್ಲಾ ಕಾಯಿನ್, ಸ್ಪೂನ್, ಪ್ಲೇಟ್ ಎಲ್ಲಾ ಅಂಟಿಸಿಕೊಂಡು ವಿಡಿಯೋ ರಿಲೀಸ್ ಮಾಡಿದ್ದಾನೆ. ವ್ಯಾಕ್ಸಿನ್ ಹಾಕಿಸಿಕೊಂಡರೆ ಕಾಂತೀಯ ಶಕ್ತಿ ಬರೋದು ಸುಳ್ಳು, ಈತ ತಾನೇ ಇದನ್ನೆಲ್ಲಾ ಮೈಗೆ ಅಂಟಿಸಿಕೊಂಡು ಸುಳ್ ನಾಟಕ ಆಡ್ತಿದಾನೆ ಅಂತಾ ವಿಜ್ಞಾನಿಗಳು ಈತನ ವಾದವನ್ನ ರಿಜೆಕ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply