ದೇಶದಲ್ಲಿ ಮತ್ತಿಬ್ಬರಿಗೆ ಒಮೈಕ್ರಾನ್​ ದೃಢ.. ಒಟ್ಟು ಸಂಖ್ಯೆ 4ಕ್ಕೆ ಏರಿಕೆ!

masthmagaa.com:
ಬೆಂಗಳೂರು ಬಳಿಕ ದೇಶದಲ್ಲಿ ಮತ್ತೆರಡು ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಒಂದು ಗುಜರಾತ್​​ನ ಜಾಮ್​​​​ನಗರದಲ್ಲಿ ಪತ್ತೆಯಾಗಿದೆ. ಜಿಂಬಾಬ್ವೆಯಿಂದ ಗುಜರಾತ್​​ನ ಜಾಮ್​ನಗರಕ್ಕೆ ನವೆಂಬರ್​​ 28ರಂದು ಬಂದಿದ್ದ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸ್ಯಾಂಪಲ್​​ನ್ನು ಜಿನೋಮ್ ಸೀಕ್ವೆನ್ಸಿಂಗ್​​ಗೆ ಪುಣೆಗೆ ಕಳುಹಿಸಲಾಗಿತ್ತು. ಇದೀಗ ಅದು ಒಮೈಕ್ರಾನ್​ ಅಂತ ಗೊತ್ತಾಗಿದೆ. ಇದ್ರ ಬೆನ್ನಲ್ಲೇ ಆ ವ್ಯಕ್ತಿಯನ್ನ ಕ್ವಾರಂಟೈನ್​​ಗೆ ಒಳಪಡಿಸಿ, ಚಿಕಿತ್ಸೆ ನೀಡಲಾಗ್ತಿದೆ. ಅವರು ವಾಸವಿದ್ದ ಪ್ರದೇಶದಲ್ಲಿ ಮೈಕ್ರೋ ಕಂಟೋನ್ಮೆಂಟ್ ಝೋನ್ ಕ್ರಿಯೇಟ್ ಮಾಡಿ, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಟೆಸ್ಟ್​ ಮಾಡಲಾಗ್ತಿದೆ. ಮತ್ತೊಂದು ಮಹಾರಾಷ್ಟ್ರದ ಕಲ್ಯಾಣ್ ​​​ದೊಂಬಿವ್ಲಿಯಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ದುಬೈಗೆ ಹೋಗಿ, ಅಲ್ಲಿಂದ ದೆಹಲಿಗೆ ಬಂದು ನಂತರ ಮುಂಬೈಗೆ ಬಂದಿದ್ದರು ಅಂತ ಗೊತ್ತಾಗಿದೆ. 33 ವರ್ಷದ ಈ ವ್ಯಕ್ತಿ ವ್ಯಾಕ್ಸಿನ್ ಕೂಡ ತಗೊಂಡಿರಲಿಲ್ಲ. ಸದ್ಯ ಇವರ ಸಂಪರ್ಕಕ್ಕೆ ಬಂದ 35 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ಬಂದಿದೆ. ಜೊತೆಗೆ ದೆಹಲಿಯಿಂದ ಮುಂಬೈಗೆ ಬಂದ ಸಹ ಪ್ರಯಾಣಿಕರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಈ ಎರಡು ಪ್ರಕರಣಗಳ ಮೂಲಕ ಭಾರತದಲ್ಲಿ ಪತ್ತೆಯಾಗಿರೋ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡ ವೈದ್ಯ ಮತ್ತು ಕೊರೋನಾದ ನೆಗೆಟಿವ್ ರಿಪೋರ್ಟ್​ ಹಿಡ್ಕೊಂಡು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಈ ಒಮೈಕ್ರಾನ್ ಕೊರೋನಾ ಬಂದಿತ್ತು.
-masthmagaa.com

Contact Us for Advertisement

Leave a Reply