ಮಹಾರಾಷ್ಟ್ರದಲ್ಲಿ ನಾಯಿ ಮತ್ತು ಮಂಗಗಳ ಗ್ಯಾಂಗ್​​​ವಾರ್​!

masthmagaa.com:

ಇಷ್ಟು ದಿನ ಮನುಷ್ಯರ ನಡುವೆ ಆಗ್ತಿದ್ದ ಕಚ್ಚಾಟದ ರೋಗ ಈಗ ಪ್ರಾಣಿಗಳಿಗೂ ಅಂಟಿಕೊಂಡಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್​ಗಾಂವ್​​​ ಎಂಬಲ್ಲಿ ನಾಯಿಗಳು ಮತ್ತು ಮಂಗಗಳ ನಡುವೆ ಭೀಕರ ಕಾಳಗ ಶುರುವಾಗಿದೆ. ಇತ್ತೀಚೆಗೆ ಇಲ್ಲಿನ ನಾಯಿಗಳು ಒಂದು ಮಂಗನ ಮರಿಯನ್ನು ಸಾಯಿಸಿದ್ವು. ಅದಕ್ಕೆ ಸೇಡು ತೀರಿಸಿಕೊಳ್ಳಲು ಮಂಗಗಳು ನಾಯಿಮರಿಗಳನ್ನು ಮರದ ಮೇಲೆ ಎತ್ಕೊಂಡು ಹೋಗಿ ಕೆಳಗೆ ಎಸೆಯುತ್ತಿವೆಯಂತೆ.. ಕಳೆದೊಂದು ತಿಂಗಳಲ್ಲಿ ಸುಮಾರು 250ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಹಾಕಿವೆ. ಇದ್ರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ನಾರಿಮರಿಗಳನ್ನು ಹತ್ಯೆಯಲ್ಲಿ ಭಾಗಿಯಾಗಿದ್ದ ಎರಡು ಮಂಗಗಳನ್ನು ಸೆರೆ ಹಿಡಿದು ಬೇರೆ ಜಿಲ್ಲೆಗಳಿಗೆ ಕರ್ಕೊಂಡು ಹೋಗಿ ಬಿಟ್ಟಿದ್ದಾರೆ. ಒಂದ್ಕಡೆ ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಜನ ಫುಲ್ ಕಾಮಿಡಿ ಮಾಡ್ತಿದ್ದಾರೆ. ವ್ಯಕ್ತಿಯೊಬ್ಬರು ರಷ್ಯಾ ಅಧ್ಯಕ್ಷ ಪುಟಿನ್ ಫೋನ್​ನಲ್ಲಿ ಮಾತಾಡ್ತಿರೋ ಫೋಟೋ ಟ್ವೀಟ್ ಮಾಡಿದ್ದು, ನಾಯಿಗಳು ಮತ್ತು ಮಂಗಗಳ 3ನೇ ವಿಶ್ವಯುದ್ಧ ತಡೆಯೋ ಬಗ್ಗೆ ಬೈಡೆನ್ ಜೊತೆ ಮಾತಾಡ್ತಿದ್ದಾರೆ ಅಂತ ಬರೆದುಕೊಂಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ನಾಯಿ, ಮಂಗಗಳ ಈ ಗ್ಯಾಂಗ್​​ವಾರನ್ನು ಕಾಮಿಡಿ ಮಾಡಿ, ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply