ಮಹೇಶ್‌ ಬಾಬು ʻSSMB 28ʼ ಸಿನಿಮಾದ ರಿಲೀಸ್‌ ಡೇಟ್‌ ಫೀಕ್ಸ್‌!

masthmagaa.com:

ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ಹೊಸ ಸಿನಿಮಾಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇದೀಗ ನಿರ್ದೇಶಕ ತ್ರಿವಿಕ್ರಮ ಅವರೊಂದಿಗೆ ಮಹೇಶ್‌ ಬಾಬು ತಮ್ಮ 28 ಸಿನಿಮಾಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ʻSSMB 28ʼ ಎಂದು ಟೈಟಲ್‌ ಕೊಡಲಾಗಿದೆ.

ಈ ಸಿನಿಮಾ ಈ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಮಹೇಶ್‌ ಬಾಬು ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳುಂಟಾದವು ಹೀಗಾಗಿ ಅವರು ಶೂಟಿಂಗ್‌ನಿಂದ ದೂರ ಉಳಿದರು. ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್‌ ಕೂಡ ಸ್ಕ್ರಿಪ್ಟ್‌ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಸಿನಿಮಾ ರಿಲೀಸ್‌ ಡೇಟ್‌ನ್ನು 2024ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದೆ. ಪೋಸ್ಟ್‌ ಮಹೇಶ್‌ ಬಾಬು ಸಿಗರೇಟ್‌ ಸೇದುತ್ತಾ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ʻವಿಶ್ವದಾದ್ಯಂತ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಅವರ ʻSSMB 28ʼ ಸಿನಿಮಾ 2024 ಜನವರಿ 13 ರಂದು ತೆರೆಕಾಣಲಿದೆ.ʼ ಎಂದು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply