masthmagaa.com:

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 105 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ. ಇದರಲ್ಲಿ 102 ಪ್ರಕರಣ ಸ್ಥಳೀಯವಾಗಿದ್ದು, 3 ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ.

ಚೀನಾದಲ್ಲಿ ಕೊರೋನಾ ಸೋಂಕಿನ ಹೊಸ ಹಾಟ್​ಸ್ಪಾಟ್ ಆಗಿರೋ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲಿ ಬರೋಬ್ಬರಿ 96 ಪ್ರಕರಣ ವರದಿಯಾಗಿದೆ. ಲಿಯೊನಾಂಗ್ ಪ್ರಾಂತ್ಯದಲ್ಲಿ 5 ಮತ್ತು ರಾಜಧಾನಿ ಬೀಜಿಂಗ್​ನಲ್ಲಿ 1 ಪ್ರಕರಣ ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾ ನೆಲದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 13 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೀನಾದಲ್ಲಿ ಇದುವರೆಗೆ 84,165 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ 4,634 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 78,957 ಸೋಂಕಿತರು ಗುಣಮುಖರಾಗಿದ್ದಾರೆ.

ಚೀನಾದಲ್ಲಿ ಕೊರೋನಾ 2ನೇ ಅಲೆ..?

ಆರಂಭದಲ್ಲಿ ತನ್ನ ದೇಶದಲ್ಲಿ ಕೊರೋನಾ ವೈರಸ್​ ಸ್ಫೋಟಗೊಂಡರೂ ಅದನ್ನು ನಿಯಂತ್ರಿಸಿದ್ದ ಚೀನಾ ಈಗ ಎರಡನೇ ಅಲೆಯ ಭೀತಿ ಎದುರಿಸುತ್ತಿದೆ. ಚೀನಾದಲ್ಲಿ ಸತತ ಎರಡು ದಿನಗಳಿಂದ 100ಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ. ಕೇವಲ 5 ದಿನದಲ್ಲಿ 375ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದೆ. ಅದ್ರಲ್ಲೂ ಉಗರ್ ಮುಸ್ಲಿಮರು ಹೆಚ್ಚಿರುವ ಷಿನ್​ಜಿಯಾಂಗ್ ಪ್ರಾಂತ್ಯ ಕೊರೋನಾ ಸೋಂಕಿನ ಹೊಸ ಕೇಂದ್ರವಾಗುತ್ತಿದೆ.

ಚೀನಾದಲ್ಲಿ ಕಳೆದ 5 ದಿನದ ಟ್ರೆಂಡ್:

ಜುಲೈ 26: 41 ಪ್ರಕರಣ

ಜುಲೈ 27: 61 ಪ್ರಕರಣ

ಜುಲೈ 28: 68 ಪ್ರಕರಣ

ಜುಲೈ 29: 101 ಪ್ರಕರಣ

ಜುಲೈ 30: 105 ಪ್ರಕರಣ

-masthmagaa.com

Contact Us for Advertisement

Leave a Reply